ಮೋಸ್ಟ್ ವಾಂಟೆಡ್ ಅಝರ್ ಅಂದರ್

ಮಂಗಳೂರು : ಮೋಸ್ಟ್ ವಾಂಟೆಡ್ ಆರೋಪಿಯೊಬ್ಬನನ್ನು ಸುರತ್ಕಲ್ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕೃಷ್ಣಾಪುರ ಕಾಟಿಪಳ್ಳದ ನಿವಾಸಿ ಅಝರ್ (29) ಮೋಸ್ಟ್ ವಾಂಟೆಡ್ ಆರೋಪಿಯಾಗಿದ್ದು 23 ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾಗಿದ್ದ. ಈತನ ವಿರುದ್ಧ ಮಂಗಳೂರು ನಗರ, ದ ಕ ಜಿಲ್ಲೆ ಮತ್ತು ಉಡುಪಿ ಜಿಲ್ಲೆಯ ವಿವಿಧ ಠಾಣೆಗಳಲ್ಲಿ 23 ಪ್ರಕರಣಗಳು ದಾಖಲಾಗಿದ್ದು ಜಾಮೀನು ರಹಿತ ವಾರಂಟ್ ಹೊರಡಿಸಲಾಗಿತ್ತು. ಮಂಗಳೂರು ಪೊಲೀಸ್ ಆಯುಕ್ತರ ಆದೇಶದ ಮೇರೆಗೆ, ಉತ್ತರ ವಿಭಾಗದ ಆಯುಕ್ತ ಮನೋಜ್ ಕುಮಾರ್ ನಿರ್ದೇಶನದಂತೆ ಸುರತ್ಕಲ್ ಠಾಣೆಯ ನೀರಿಕ್ಷಕರಾದ ಮಹೇಶ್ ಕುಮಾರ್ ನೇತೃತ್ವದಲ್ಲಿ ಈತನನ್ನು ಕಾರ್ಯಾಚಾರಣೆ ನಡೆಸಿ ಬಂಧಿಸಲಾಗಿದೆ.

LEAVE A REPLY

Please enter your comment!
Please enter your name here