ಅಕ್ರಮವಾಗಿ ಸಾಗಿಸುತ್ತಿದ್ದ 9,300 ಗ್ರಾಂ ಚಿನ್ನ ವಶಕ್ಕೆ ಪಡೆದ ಪೊಲೀಸರು

ಮಂಗಳೂರು: ದಾಖಲೆಯಿಲ್ಲದೆ ಪಿಕ್ಅಪ್ ನಲ್ಲಿ ಸಾಗಿಸಲಾಗುತ್ತಿದ್ದ 2.30 ಕೋಟಿ ರೂಪಾಯಿ ಮೌಲ್ಯದ 9.300 ಕಿ ಗ್ರಾಂ ತೂಕದ ಚಿನ್ನವನ್ನು ಚಿಕ್ಕಮಗಳೂರಿನ ತರೀಕೆರೆ ಪೊಲೀಸರು ವಶಕ್ಕೆ ಪಡೆದು ಇಬ್ಬರನ್ನು ಬಂಧಿಸಿದ್ದಾರೆ.

ಚುನಾವಣೆ ಹಿನ್ನಲೆಯಲ್ಲಿ ತರೀಕೆರೆಯಲ್ಲಿ ರಚಿಸಲಾದ ಪೊಲೀಸ್ ಚೆಕ್ ಪೋಸ್ಟ್ ನಲ್ಲಿ ವಾಹನಗಳನ್ನು ತಪಾಸಣೆ ನಡೆಸುವ ವೇಳೆ ಇಬ್ಬರು ವ್ಯಕ್ತಿಗಳು ನಾಲ್ಕು ಬಾಕ್ಸ್ ನಲ್ಲಿ ಚಿನ್ನದ ಸರ ಮತ್ತು ಬಿಸ್ಕಟ್ ಗಳನ್ನು ಅಕ್ರಮವಾಗಿ ಪಿಕ್ಅಪ್ ನಲ್ಲಿ ಸಾಗಾಟ ಮಾಡುವುದು ಪತ್ತೆಯಾಗಿದೆ. ಚಿಕ್ಕಮಗಳೂರು ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಉಮಾ ಪ್ರಶಾಂತ್ ನೇತೃತ್ವದಲ್ಲಿ ಪಿಕಪ್ ಚಾಲಕ ಸೇರಿದಂತೆ ಇಬ್ಬರನ್ನು ಬಂಧಿಸಿದ್ದು ಚಿನ್ನ ಮತ್ತು ಪಿಕಪ್ ವಶಕ್ಕೆ ಪಡೆಯಲಾಗಿದೆ.

LEAVE A REPLY

Please enter your comment!
Please enter your name here