ಮಂಗಳೂರು :ಭಾರತದ ಅದಾನಿ ಸಮೂಹ ಸಂಸ್ಥೆಗಳು ವ್ಯಾಪಕ ಅವ್ಯವಹಾರ ನಡೆಸಿದೆ ಎಂದು ಆರೋಪಿಸಿ ಕಳೆದ ಜನವರಿಯಲ್ಲಿ ಸ್ಪೋಟಕ ವರದಿ ಹೊರ ತಂದಿದ್ದ ಅಮೇರಿಕಾದ ಹಿಂಡೆನ್ ಬರ್ಗ್ ಸಂಶೋಧನಾ ಸಂಸ್ಥೆ ಸದ್ಯದಲ್ಲಿಯೇ ಇನ್ನೊಂದು ವರದಿಯನ್ನು ಹೊರ ತರುವುದಾಗಿ ಹೇಳಿದೆ. “ಹೊಸ ವರದಿ ಶೀಘ್ರದಲ್ಲಿ…. ಇನ್ನೊಂದು ಹೊಸ ವರದಿ” ಎಂದು ಟ್ವೀಟ್ ಮಾಡಿರುವ ಸಂಸ್ಥೆ ಈ ಬಗ್ಗೆ ಹೆಚ್ಚಿನ ಯಾವುದೇ ಮಾಹಿತಿ ನೀಡಿಲ್ಲ. ಸಂಸ್ಥೆ ಹೊರ ತರಲಿರುವ ದೊಡ್ಡ ವರದಿ ಯಾರದ್ದು ಎನ್ನುವ ಕುತೂಹಲ ಈಗ ಎಲ್ಲರಲ್ಲಿ.