ಮಂಗಳೂರು : ಆಹಾರ ಅರಸಿ ನಾಡಿಗೆ ಬಂದ ಚಿರತೆಯೊಂದಕ್ಕೆ ಔತಣ ಭಾಗ್ಯ ದೊರೆತಿದೆ. ಗ್ರಾಮದ ಹೊರಭಾಗದಲ್ಲಿರುವ ಕೋಳಿ ಫಾರ್ಮ್ ಗೆ ನುಗ್ಗಿದ ಚಿರತೆ ಬರೋಬ್ಬರಿ 200 ನಾಟಿ ಕೋಳಿಗಳನ್ನು ಸ್ವಾಹ ಮಾಡಿ ಜಾಗ ಖಾಲಿ ಮಾಡಿದೆ.
ತುಮಕೂರಿನ ಚಿಕ್ಕನಾಯಕನಹಳ್ಳಿಯ ಯಗಚಿಹಳ್ಳಿ ಗ್ರಾಮದ ಕುಟುಂಬವೊಂದು ಜೀವನಾದಾರಕ್ಕಾಗಿ ಗ್ರಾಮದ ಹೊರಬಾಗದಲ್ಲಿರುವ ತೋಟದಲ್ಲಿ ನಾಟಿ ಕೋಳಿ ಫಾರ್ಮ್ ವೊಂದನ್ನು ನಿರ್ಮಿಸಿತ್ತು. ಸುಸಜ್ಜಿತವಾಗಿ ನಿರ್ಮಿಸಿದ ಫಾರ್ಮ್ ಒಳಗಡೆ ಏನೂ ಬಾರದಂತೆ ಜಾಲರಿಯನ್ನು ನಿರ್ಮಿಸಲಾಗಿತ್ತು. ಅದು ಹೇಗೋ ತೋಟದೊಳಗೆ ಬಂದ ಚಿರತೆ ಕೋಳಿ ಫಾರ್ಮ್ ನೊಳಗೆ ನುಗ್ಗಿದೆ. ಮಾತ್ರವಲ್ಲ 200 ಕೋಳಿ ತಿಂದು ತೇಗಿದೆ. ಹೆಚ್ಚಿನ ಕೋಳಿಗಳನ್ನು ಪೂರ್ತಿಯಾಗಿ ತಿಂದು ಮುಗಿಸಿದ ಚಿರತೆ ಕೆಲವು ಕೋಳಿಗಳನ್ನು ಅರ್ಧ ತಿಂದು ಮುಗಿಸಿದೆ.