ಇವರು ವೀರರು, ಇವರು ಶೂರರು…..ಇವರೇ ನಮ್ಮ ಅಗ್ನಿವೀರರು…

ಮಂಗಳೂರು: ದೇಶದ ಮೊದಲ ಅಗ್ನಿವೀರರ ತಂಡ 4 ತಿಂಗಳ ಕಠಿಣ ತರಬೇತಿ ಮುಗಿಸಿ ಸೇವೆಗೆ ಸಿದ್ದವಾಗಿದೆ. ಒಡಿಶಾದ ಐಎನ್‌ಎಸ್‌ ಚಿಲ್ಕಾದಲ್ಲಿ 4 ತಿಂಗಳ ಕಠಿಣ ತರಬೇತಿ ಮುಗಿಸಿದ 273 ಮಹಿಳೆಯರೂ ಸೇರಿದಂತೆ 2,600 ನೌಕಾ ಅಗ್ನಿವೀರರು  ಸೇವೆಗೆ ಸಿದ್ದರಾಗಿದ್ದು, ಮಾರ್ಚ್ 28ರಂದು ಪಾಸಿಂಗ್ ಔಟ್ ಪರೇಡ್ ನಡೆಯಲಿದೆ. 

ನಿರ್ಗಮನ ಪಥಸಂಚಲನದ ಬಳಿಕ ಸಾಗರ ತರಬೇತಿಗಾಗಿ ಮುಂಚೂಣಿ ಯುದ್ದ ನೌಕೆಗಳಲ್ಲಿ ಈ ಅಗ್ನಿವೀರರನ್ನು ನಿಯೋಜನೆ ಮಾಡಲಾಗುತ್ತದೆ. ವಿಶೇಷವೆಂದರೆ ಸಾಮಾನ್ಯವಾಗಿ ಹಗಲು ಹೊತ್ತಿನಲ್ಲಿ ಕೈಗೊಳ್ಳುವ ಪಾಸಿಂಗ್ ಔಟ್ ಪರೇಡ್‌ನ್ನು ಸಶಸ್ತ್ರ ಪಡೆಗಳ ಇತಿಹಾಸದಲ್ಲೇ ಈ ಬಾರಿ ಸೂರ್ಯಾಸ್ತದ ಬಳಿಕ ನಡೆಸಲಾಗುತ್ತಿದೆ. ಮೊದಲ ತಂಡದ ಅಗ್ನಿವೀರರಿಗೆ 2022ರ ನವೆಂಬರ್‌ ತಿಂಗಳಿಂದ ತರಬೇತಿ ಆರಂಭವಾಗಿತ್ತು. ದೈಹಿಕ ತರಬೇತಿ, ಸ್ವಿಮ್ಮಿಂಗ್‌, ಸಣ್ಣ ಶಸ್ತ್ರಾಸ್ತ್ರಗಳು, ಸೈಬರ್‌ ಭದ್ರತೆ, ನೌಕಾಪಡೆ ಕೇಂದ್ರಿತ ತರಬೇತಿ ಪಡೆದ ನೌಕಾ ಅಗ್ನಿವೀರರ ಪಡೆ ಸೇವೆಗೆ ಸಿದ್ದವಾಗಿದೆ. 

LEAVE A REPLY

Please enter your comment!
Please enter your name here