ಮಂಗಳೂರು: ರಾಹುಲ್ ಗಾಂಧಿ, ಮೋದಿ ಉಪನಾಮ ಹೇಳಿಕೆ ಪ್ರಕರಣದಲ್ಲಿ ದೋಷಿ ಎಂದು ಘೋಷಣೆಯಾಗುತ್ತಿದ್ದಂತೆ ಬಿಜೆಪಿ ನಾಯಕಿ ಖುಷ್ಬೂ ಸುಂದರ್ 2018 ರಲ್ಲಿ ಮೋದಿ ಹೆಸರಿನ ಬಗ್ಗೆ ಮಾಡಿದ್ದ ಟ್ವೀಟ್ ಮತ್ತೆ ಮುನ್ನೆಲೆಗೆ ಬಂದಿದೆ.
ಇಲ್ಲಿ ಮೋದಿ, ಅಲ್ಲಿ ಮೋದಿ, ಎಲ್ಲಿ ನೋಡಿದರೂ ಮೋದಿ, ಆದರೇನು? ಪ್ರತಿ ಮೋದಿ ಹಿಂದೆ ಭ್ರಷ್ಟಾಚಾರದ ಉಪನಾಮವಿದೆ. ಮೋದಿ ಅಂದರೆ ಭ್ರಷ್ಟಾಚಾರ್, ಮೋದಿ ಹೆಸರಿನ ಅರ್ಥವನ್ನು ಭ್ರಷ್ಟಾಚಾರವೆಂದು ಬದಲಾಯಿಸೋಣ, ಇದು ಚೆನ್ನಾಗಿ ಹೊಂದಿಕೊಳ್ಳುತ್ತದೆ, ನೀರವ್, ಲಲಿತ್, ನಮೋ ಅಂದರೆ ಭ್ರಷ್ಟಾಚಾರ ಎಂದು ಖುಷ್ಬೂ ಟ್ವೀಟ್ ಮಾಡಿದ್ದರು.
ತನ್ನ ಹಳೆಯ ಟ್ವೀಟ್ ಚರ್ಚೆಯಾಗುತ್ತಿದ್ದಂತೆ ಪ್ರತಿಕ್ರಿಯೆ ನೀಡಿರುವ ಖುಷ್ಬೂ, ನನ್ನ ಹಳೆಯ ಟ್ವೀಟ್ ಅನ್ನು ಮತ್ತೆ ಎಳೆದು ತರುತ್ತಿರುವ ಕಾಂಗ್ರೆಸ್ ಎಷ್ಟು ಹತಾಶಗೊಂಡಿದೆ ಎಂದು ತೋರಿಸುತ್ತಿದೆ, ನಾನು ಕಾಂಗ್ರೆಸ್ ಪಕ್ಷದಲ್ಲಿದ್ದಾಗ ಪೋಸ್ಟ್ ಮಾಡಿದ ಮೋದಿ ಟ್ವೀಟ್‌ಗೆ ನಾನು ನಾಚಿಕೆ ಪಡುವುದಿಲ್ಲ, ನಾನು ನಾಯಕನನ್ನು ಅನುಸರಿಸುತ್ತಿದ್ದೆ ಮತ್ತು ಪಕ್ಷದ ಭಾಷೆಯಲ್ಲಿ ಮಾತನಾಡುತ್ತಿದ್ದೆ, ಎಂದು ಹೇಳಿದ್ದಾರೆ.
ಇದಕ್ಕೆ ಪ್ರತಿಕ್ರಿಯೆ ನೀಡಿದ ನೆಟ್ಟಿಗರೊಬ್ಬರು, ಚಿಂತೆ ಮಾಡಬೇಡಿ ಮೇಡಂ, ನಿಮ್ಮ ಈ ಟ್ವೀಟ್‌ಗೆ ಯಾರೂ ಕೇಸ್ ಹಾಕಲ್ಲ, ಯಾಕಂದ್ರೆ ಅವರು ರಾಹುಲ್ ಗಾಂಧಿಗೆ ಹೆದರಿದ್ದಾರೆ, ನಿಮ್ಮ ಬಗ್ಗೆ ಯಾರೂ ಹೆದರಲ್ಲ ಎಂದು ಟ್ವೀಟ್ ಮಾಡಿದ್ದಾರೆ.
ಟ್ವೀಟ್ ಗಾಗಿ ಇಲ್ಲಿ ಕ್ಲಿಕ್ ಮಾಡಿ