ಬಿಜೆಪಿಯಲ್ಲಿ ಬಾನ್ಸುರಿ ನಿನಾದ…..

ಮಂಗಳೂರು: ವಿದೇಶಾಂಗ ವ್ಯವಹಾರ ಖಾತೆ ಮಾಜಿ ಸಚಿವೆ, ದಿ.ಸುಷ್ಮಾ ಸ್ವರಾಜ್ ಪುತ್ರಿ ಬಾನ್ಸುರಿ ಸ್ವರಾಜ್ ಅವರನ್ನು ದೆಹಲಿಯ ಬಿಜೆಪಿ ಕಾನೂನು ಘಟಕದ ಸಹ ಸಂಚಾಲಕರನ್ನಾಗಿ ನೇಮಕ ಮಾಡಲಾಗಿದೆ. ಈ ಮೂಲಕ ಬಾನ್ಸುರಿ ರಾಷ್ಟ್ರ ರಾಜಕಾರಣಕ್ಕೆ ಕಾಲಿಟ್ಟಿದ್ದಾರೆ. ಪ್ರಸ್ತುತ ಹರ್ಯಾಣದಲ್ಲಿ ಹೆಚ್ಚುವರಿ ಅಡ್ವೋಕೇಟ್ ಜನರಲ್ ಆಗಿ ಕಾರ್ಯನಿರ್ವಹಿಸುತ್ತಿರುವ ಬಾನ್ಸುರಿ ವಾರ್ವಿಕ್ ಯೂನಿರ್ವಸಿಟಿಯಲ್ಲಿ ಇಂಗ್ಲಿಷ್ ಲಿಟರೇಚರ್ ನಲ್ಲಿ ಪದವಿ ಪಡೆದಿದ್ದು, ಲಂಡನ್ ನ ಬಿಪಿಪಿ ಲಾ ಸ್ಕೂಲ್ ನಲ್ಲಿ ಕಾನೂನು ಪದವಿ ಪಡೆದಿದ್ದಾರೆ.

ಆಕ್ಸ್ ಫರ್ಡ್ ಯೂನಿರ್ವಸಿಟಿಯಲ್ಲಿ ಬ್ಯಾರಿಸ್ಟರ್ ಲಾ ಹಾಗೂ ಮಾಸ್ಟರ್ ಡಿಗ್ರಿ ಪದವಿ ಪಡೆದಿದ್ದು, ರಿಯಲ್ ಎಸ್ಟೇಟ್, ತೆರಿಗೆ, ಅಂತಾರಾಷ್ಟ್ರೀಯ ವಾಣಿಜ್ಯ ಆರ್ ಬಿಟ್ರೇಶನ್ ಹಾಗೂ ಕ್ರಿಮಿನಲ್ ವ್ಯಾಜ್ಯಗಳ ಕುರಿತು ಕಾನೂನು ಸಮರ ನಡೆಸುತ್ತಿದ್ದಾರೆ. ಬಿಜೆಪಿ ಕಾನೂನು ಘಟಕದಲ್ಲಿ ಸ್ಥಾನ ನೀಡುವ ಮೂಲಕ ಪಕ್ಷದಲ್ಲಿ ಸೇವೆ ಸಲ್ಲಿಸಲು ಅವಕಾಶ ನೀಡಿರುವುದಕ್ಕೆ ಪಕ್ಷದ ನಾಯಕರಿಗೆ ಅಭಿನಂದನೆ ಸಲ್ಲಿಸುವುದಾಗಿ ಬಾನ್ಸುರಿ ಸ್ವರಾಜ್ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here