ಮಲಿನಗೊಂಡ ನೇತ್ರಾವತಿ -ಸ್ನಾನಘಟ್ಟದಲ್ಲಿ ಸೋಪ್, ಶಾಂಪೂ ಬಳಕೆಗೆ ನಿಷೇಧ

ಮಂಗಳೂರು: ನೇತ್ರಾವತಿ ನದಿ ನೀರಿನ ಹರಿವು ಕ್ಷೀಣಿಸಿರುವ ಹಿನ್ನೆಲೆಯಲ್ಲಿ ನೀರು ಮಲಿನವಾಗುವುದನ್ನು ತಡೆಯಲು ಧರ್ಮಸ್ಥಳದ ನೇತ್ರಾವತಿ ಸ್ನಾನಘಟ್ಟದಲ್ಲಿ ಸಾಬೂನು, ಶಾಂಪೂಗಳ ಮಾರಾಟ ಮತ್ತು ಬಳಕೆಯನ್ನು ನಿಷೇಧಿಸಲಾಗಿದೆ.

ಈ ಕುರಿತು ಧರ್ಮಸ್ಥಳ ಗ್ರಾ.ಪಂ. ಸಭೆಯಲ್ಲಿ ನಿರ್ಣಯ ಕೈಗೊಂಡು ನದಿ ಸುತ್ತಲಿನ ಅಂಗಡಿಗಳಲ್ಲಿ ಸೋಪು, ಶಾಂಪೂ ಮಾರಾಟ ಮಾಡದಂತೆ ನೋಟಿಸ್‌ ನೀಡಲಾಗಿದೆ. ಧರ್ಮಸ್ಥಳ ಕ್ಷೇತ್ರದ ವತಿಯಿಂದ ಸ್ನಾನಘಟ್ಟದಲ್ಲಿ ಸ್ವಚ್ಛತೆ ಕಾಪಾಡುವಂತೆ ನಿತ್ಯ  ಜಾಗೃತಿ ಮೂಡಿಸಲಾಗುತ್ತಿದೆ. ಆದರೆ ಯಾತ್ರಿಕರು ನದಿಗೆ ಬಟ್ಟೆ ಎಸೆಯುವುದು, ಸೋಪು, ಶಾಂಪೂ ಬಳಸಿ ಅದರ ಪ್ಲಾಸ್ಟಿಕ್‌ ನದಿಗೆ ಎಸೆಯುವ ಮೂಲಕ ನೀರು  ಹೆಚ್ಚು ಮಲಿನಗೊಳ್ಳಲು ಕಾರಣರಾಗುತ್ತಿದ್ದಾರೆ. ಪಂಚಾಯತ್‌ ವತಿಯಿಂದಲೂ ಯಾತ್ರಿಕರಲ್ಲಿ ಜಾಗೃತಿ ಮೂಡಿಸುವ ಕಾರ್ಯವನ್ನು ಮಾಡಲಾಗುತ್ತಿದೆ. 

LEAVE A REPLY

Please enter your comment!
Please enter your name here