ಸಿಹಿ ಮುತ್ತು ಸಿಹಿ ಮುತ್ತು ಇನ್ನೊಂದು…….

ಮಂಗಳೂರು: ಅಭಿಮಾನಿಗಳ ಅತಿರೇಕದ ವರ್ತನೆ ಇಂದು ನಿನ್ನೆಯದ್ದಲ್ಲ. ಮೈದಾನದಲ್ಲಿ ನಗ್ನರಾಗಿ, ಅರೆನಗ್ನರಾಗಿ ಓಡುವುದು, ಚುಂಬಿಸುವುದು ಅವಾಗ ಈವಾಗ ನಡೆದೇ ಇದೇ. ಸಿನಿಮಾ ಮತ್ತು ಕ್ರೀಡಾರಂಗದಲ್ಲಿ ಹೆಚ್ಚಾಗಿ ಕಾಣುತ್ತಿದ್ದ ಅಭಿಮಾನಿಗಳ ಪರಾಕಾಷ್ಠೆಯ ವರ್ತನೆ ಈಗ ರಾಜಕೀಯಕ್ಕೂ ಕಾಲಿಟ್ಟಿದೆ.

ಬೆಂಗಳೂರಿನ ಯಶವಂತಪುರ ಕ್ಷೇತ್ರದಲ್ಲಿ ಕುಮಾರ ಸ್ವಾಮಿಯವರ ಮಿಂಚಿನ ಪ್ರಚಾರದ ವೇಳೆ ಸೆಲ್ಫಿ ತೆಗೆದುಕೊಳ್ಳಲು ಬಂದ ಮಹಿಳಾ ಅಭಿಮಾನಿಯೊಬ್ಬರು ಎಕಾಏಕಿ ಕುಮಾರಸ್ವಾಮಿ ಗೆ ಮುತ್ತಿಟ್ಟಿದ್ದಾರೆ. ಇದರಿಂದ ಒಂದು ಕ್ಷಣ ಎಚ್ ಡಿ ಕೆ ತಬ್ಬಿಬ್ಬಾದರೂ ಬಳಿಕ ಸಾವರಿಸಿಕೊಂಡು ಮಹಿಳೆ ಜತೆ ಮಾತನಾಡಿ ಕಳುಹಿಸಿಕೊಟ್ಟಿದ್ದಾರೆ. ಎರಡು, ಮೂರು ದಿನಗಳ ಹಿಂದೆ ಮಂಡ್ಯದಲ್ಲಿ ಯುವಕನೊಬ್ಬ ಎಚ್ ಡಿ ಕೆ ಗೆ ಮುತ್ತಿಟ್ಟಿದ್ದ. ಅಭಿಮಾನಕ್ಕೆ ಎಲ್ಲೇ ಎಲ್ಲಿದೆ ಅಲ್ಲವೇ?

LEAVE A REPLY

Please enter your comment!
Please enter your name here