ಮಂಗಳೂರು: ನ್ಯೂಯಾರ್ಕ್ ಮೆಟ್ರೋಪಾಲಿಟನ್ ಮ್ಯೂಸಿಯಂ ಆಫ್ ಆರ್ಟ್ ಭಾರತಕ್ಕೆ 15 ಶಿಲ್ಪಗಳನ್ನು ಹಿಂದಿರುಗಿಸುವುದಾಗಿ ಹೇಳಿದೆ.
ಈ ಕುರಿತು ದಾಖಲಾಗಿದ್ದ ಪ್ರಕರಣದ ವಿಚಾರಣೆ ನಡೆಸಿದ ನ್ಯೂಯಾರ್ಕ್ ಸುಪ್ರೀಂ ಕೋರ್ಟ್ 77 ಕ್ಕೂ ಹೆಚ್ಚು ಭಾರತೀಯ ಪುರಾತನ ವಸ್ತುಗಳನ್ನು ಮ್ಯೂಸಿಯಂ ಗೆ ಮಾರಾಟ ಮಾಡಿದ ಕುಖ್ಯಾತ ಕಳ್ಳ ಸಾಗಾಣಿಕೆದಾರ ಸುಭಾಷ್ ಕಪೂರ್ ಗೆ 10 ವರ್ಷ ಜೈಲು ಶಿಕ್ಷೆ ವಿಧಿಸಿದೆ. ಮಾತ್ರವಲ್ಲ ಮ್ಯೂಸಿಯಂ ವಿರುದ್ಧ ಸರ್ಚ್ ವಾರಂಟ್ ಹೊರಡಿಸಿತ್ತು. ಈ ಹಿನ್ನಲೆಯಲ್ಲಿ ಮ್ಯೂಸಿಯಂ 15 ಶಿಲ್ಪಗಳನ್ನು ಭಾರತಕ್ಕೆ ಹಿಂತಿರುಗಿಸುವುದಾಗಿ ಹೇಳಿದೆ.