ಮಂಗಳೂರು: ಕಣಚೂರ್ ಮೆಡಿಕಲ್ ಕಾಲೇಜಿನಲ್ಲಿ ಎಂ ಬಿ ಬಿ ಎಸ್ ಸೀಟು ಕೊಡಿಸುವುದಾಗಿ ಹೇಳಿ ಲಕ್ಷಾಂತರ ರೂಪಾಯಿ ಹಣ ಪಡೆದು ಮೋಸ ಮಾಡಿರುವ ಉತ್ತರ ಪ್ರದೇಶ ಮೂಲದ ಇಫ್ತಿಕಾರ್ ಅಹಮದ್ (31) ಎಂಬಾತನನ್ನು ಮಹಾರಾಷ್ಟ್ರ ಪೊಲೀಸರು ಬಂಧಿಸಿದ್ದಾರೆ.
ಬಾಡಿ ವಾರಂಟ್ ಮೂಲಕ ಇಫ್ತಿಕಾರ್ ನನ್ನು ಉಳ್ಳಾಲ ಠಾಣೆಗೆ ಕರೆ ತರಲಾಗಿದ್ದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಬೀದರ್ ನ ವ್ಯಕ್ತಿಯೊಬ್ಬರಿಂದ ಎಂಬಿಬಿಎಸ್ ಸೀಟು ಕೊಡಿಸುವುದಾಗಿ 22.5 ಲಕ್ಷ ರೂಪಾಯಿ ಪಡೆದು ವಂಚಿಸಿದ್ದ ಇಫ್ತಿಕಾರ್ ವಿರುದ್ಧ ದೂರು ದಾಖಲಾಗಿತ್ತು.