70 ಕೋಟಿ ಭಾರತೀಯರ ಡಾಟಾ ಕಳವು – ಆರೋಪಿ ಬಂಧನ

ಮಂಗಳೂರು: 70 ಕೋಟಿ ಭಾರತೀಯರ ವೈಯಕ್ತಿಕ ಡಾಟಾವನ್ನು ಕಳವು ಮಾಡಿರುವ ದೇಶದ ಅತೀ ದೊಡ್ಡ ಡಾಟಾ ಕಳವು ಪ್ರಕರಣವನ್ನು ಹೈದರಾಬಾದ್ ಪೊಲೀಸರು ಪತ್ತೆ ಹಚ್ಚಿ ಆರೋಪಿಯನ್ನು ಬಂಧಿಸಿದ್ದಾರೆ.

ಬಂಧಿತ ಆರೋಪಿಯನ್ನು ವಿನಯ್ ಭಾರಧ್ವಜ್ ಎಂದು ಗುರುತಿಸಲಾಗಿದ್ದು ಈತನಿಂದ ಶಿಕ್ಷಣ – ತಂತ್ರಜ್ಞಾನ ಸಂಸ್ಥೆಗಳ ವಿದ್ಯಾರ್ಥಿಗಳ ದತ್ತಾಂಶವನ್ನು ವಶಪಡಿಸಿಕೊಳ್ಳಲಾಗಿದೆ. ವಿನಯ್ ಭಾರಧ್ವಜ್ ಬಳಿ 24 ರಾಜ್ಯಗಳ, ದೇಶದ 8 ಮಹಾನಗರಗಳಿಗೆ ಸೇರಿದ 70 ಕೋಟಿ ವ್ಯಕ್ತಿಗಳು ಮತ್ತು ಸಂಸ್ಥೆಗಳ ವೈಯಕ್ತಿಕ ಮತ್ತು ಗೌಪ್ಯ ಡಾಟಾ ಇತ್ತು ಎನ್ನಲಾಗಿದೆ. ಆರೋಪಿ ವಿನಯ್ ಹರಿಯಾಣದ ಫರಿದಾಬಾದ್ ನಲ್ಲಿ ವೆಬ್ ಸೈಟ್ ವೊಂದರ ಮೂಲಕ ಕ್ಲವ್ಡ್ ಡ್ರೈವ್ ಲಿಂಕ್ ಬಳಸಿ ಗ್ರಾಹಕರಿಗೆ ಡಾಟಾ ಮಾರಾಟ ಮಾಡುತ್ತಿದ್ದ ಎನ್ನಲಾಗಿದೆ.

LEAVE A REPLY

Please enter your comment!
Please enter your name here