ಮಂಗಳೂರು: ಮೊಬೈಲ್ ಬಳಕೆ ಅತಿಯಾಗಿರುವ ಬಗ್ಗೆ ಅಮೇರಿಕಾದ ವಿಜ್ಞಾನಿ, ಮೊಬೈಲ್ ಪಿತಾಮಹ ಮಾರ್ಟಿನ್ ಕೂಪರ್ ಆತಂಕ ವ್ಯಕ್ತ ಪಡಿಸಿದ್ದಾರೆ.
ಮೊಬೈಲ್ ನ ಗಾತ್ರ ಚಿಕ್ಕದಾಗಿದೆ ಆದರೆ ಅವುಗಳ ಅತಿಯಾದ ಮತ್ತು ಅತಿರೇಕದ ಬಳಕೆ ನನ್ನನ್ನು ಘಾಸಿಗೊಳಿಸಿದೆ ಎಂದು ಮಾರ್ಟಿನ್ ಕೂಪರ್ ತಮ್ಮ ನೋವನ್ನು ಹೊರಹಾಕಿದ್ದಾರೆ. ಭವಿಷ್ಯದಲ್ಲಿ ಸೆಲ್ ಫೋನ್ ಶಿಕ್ಷಣ, ಆರೋಗ್ಯ ರಕ್ಷಣೆಯಲ್ಲಿ ಕ್ರಾಂತಿಯನ್ನು ಉಂಟು ಮಾಡಲು ಸಾಧ್ಯವಾಗುತ್ತದೆ ಎಂದು ಹೇಳಿರುವ ಕೂಪರ್ ಮೊಬೈಲ್ ಈಗ ಚಟವಾಗಿ ಮಾರ್ಪಟ್ಟಿದೆ, ಇದು ಚಿಂತೆಗೀಡುಮಾಡಿದೆ ಎಂದು ಹೇಳಿದ್ದಾರೆ. ಈ ನೋವಿನ ನಡುವೆಯೂ ಸಮಾಜದಲ್ಲಿ ಧನಾತ್ಮಕ ಬದಲಾವಣೆ ತರುವಲ್ಲಿ ಮೊಬೈಲ್ ಆಗಾಧ ಸಾಮರ್ಥ್ಯ ಹೊಂದಿದೆ ಎಂದು ಮಾರ್ಟಿನ್ ಕೂಪರ್ ಹೇಳಿದ್ದಾರೆ.