ಬೆಳೆ ರಕ್ಷಣೆ – ಕೋವಿ ಠೇವಣಿಗೆ ವಿನಾಯತಿ – ದ.ಕ ಜಿಲ್ಲಾಧಿಕಾರಿ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರಾಣಿಗಳಿಂದ ಬೆಳೆ ರಕ್ಷಣೆಗಾಗಿ ಕೋವಿ ಪರವಾನಗಿ ಪಡೆದ ಕೃಷಿಕರಿಗೆ ಜಿಲ್ಲಾಧಿಕಾರಿ ರವಿಕುಮಾರ್ ಕೋವಿ ಠೇವಣಿಯಿಂದ ವಿನಾಯತಿ ನೀಡಿದ್ದಾರೆ.

ಅಪರಾಧ ಹಿನ್ನಲೆ, ಜಾಮೀನಿನಲ್ಲಿ ಬಿಡುಗಡೆಯಾದವರು, ಈ ಹಿಂದೆ ಚುನಾವಣೆಯಲ್ಲಿ ದೊಂಬಿ ಗಲಾಟೆಯಲ್ಲಿ ಭಾಗಿಯಾದವರನ್ನು ಹೊರತು ಪಡಿಸಿ ಉಳಿದ ರೈತರಿಗೆ ಕೋವಿ ಠೇವಣಿಯಿಂದ ವಿನಾಯತಿ ನೀಡಲಾಗಿದೆ. ಪರವಾನಿಗೆದಾರರಿಗೆ ಬೆಳೆ ರಕ್ಷಣೆಗಾಗಿ ಶಸ್ತ್ರಾಸ್ತ್ರ ದ ಅವಶ್ಯಕತೆ ಇದ್ದಲ್ಲಿ ಪೂರಕ ದಾಖಲೆಯೊಂದಿಗೆ ತಹಶೀಲ್ದಾರರಿಗೆ ಅಹವಾಲು ಸಲ್ಲಿಸಬಹುದು ಎಂದು ಜಿಲ್ಲಾಧಿಕಾರಿ  ಆದೇಶದಲ್ಲಿ ತಿಳಿಸಲಾಗಿದೆ.

LEAVE A REPLY

Please enter your comment!
Please enter your name here