ಮಂಗಳೂರು: ರಾಜ್ಯದ ಒಕ್ಕಲಿಗರು ಬೇರೆಯವರ ಅನ್ನವನ್ನು ಕಸಿದು ತಿನ್ನಬೇಕು ಎನ್ನುವವರಲ್ಲ.ಒಕ್ಕಲಿಗ ಸಮುದಾಯಕ್ಕೆ ಅನ್ಯಾಯವಾಗುತ್ತಿದ್ದು ಶೇ.4 ರಿಂದ ಶೇ.16 ಕ್ಕೆ ಮೀಸಲಾತಿ ಹೆಚ್ಚಳ ಮಾಡಬೇಕು ಎಂದು ತುಮಕೂರು ಶ್ರೀ ಸ್ಪಟಿಕಾಪುರಿ ಮಹಾ ಸಂಸ್ಥಾನ ಮಠದ ಪೀಠಾಧ್ಯಕ್ಷ ಶ್ರೀ ನಂಜಾವಧೂತ ಸ್ವಾಮೀಜಿ ಒತ್ತಾಯಿಸಿದ್ದಾರೆ.
ಮದ್ದೂರಿನ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಸ್ವಾಮೀಜಿ 2 ಪರ್ಸೆಂಟ್ ಸ್ವೀಕಾರ ಮಾಡ ಬೇಕೋ ಬೇಡವೋ ಎಂಬ ಗೊಂದಲವಿದೆ. ಮೀಸಲಾತಿಯಿಲ್ಲದೇ ಸರಕಾರದ ಎಲ್ಲಾ ರಂಗದಲ್ಲಿ 70 ಶೇಕಡಾ ಇರುವವರಿಗೆ ಮತ್ತೆ 18 ಶೇ. ಮೀಸಲಾತಿ ನೀಡಿದರೆ ಬಡವರ ಮಕ್ಕಳು ಏನು ಮಾಡಬೇಕು? ಜನಸಂಖ್ಯೆಯಲ್ಲಿ ಶೇ.15ರಷ್ಟಿರುವ ಸಮುದಾಯಕ್ಕೆ 4ಶೇ. ಮೀಸಲಾತಿ ನೀಡುವುದು ಯಾವ ನ್ಯಾಯ? ಇದರಿಂದ ಒಕ್ಕಲಿಗರ ಮಕ್ಕಳು ಅವಕಾಶದಿಂದ ವಂಚಿತರಾಗುತ್ತಿದ್ದಾರೆ.ಇದರ ವಿರುದ್ದ ಹೋರಾಟದ ಹಾದಿ ಹಿಡಿಯ ಬೇಕಾಗುತ್ತದೆ ಎಂದು ಸ್ವಾಮೀಜಿ ಎಚ್ಚರಿಕೆ ನೀಡಿದ್ದಾರೆ. ಸಮುದಾಯಕ್ಕಾಗಿರುವ ಮೀಸಲಾತಿ ಅನ್ಯಾಯವನ್ನು ಯಾವ ರೀತಿ ಸರಿ ಪಡಿಸುತ್ತೀರಿ? ಎನ್ನುವುದನ್ನು ಮೂರು ಪ್ರಮುಖ ಪಕ್ಷಗಳು ಬಹಿರಂಗ ಪಡಿಸಬೇಕು. ಸಮುದಾಯಕ್ಕಾದ ಅನ್ಯಾಯವನ್ನು ಯಾವ ರೀತಿ ಸರಿ ಪಡಿಸುತ್ತೀರಿ ಎಂಬುವುದರ ಮೇಲೆ ಒಕ್ಕಳಿಗ ಸಮುದಾಯ ಮುಂಬರುವ ಚುನಾವಣೆಯಲ್ಲಿ ತೀರ್ಮಾನ ತೆಗೆದುಕೊಳ್ಳುತ್ತದೆ ಎಂದು ಸ್ವಾಮೀಜಿ ಹೇಳಿದ್ದಾರೆ.