ಮಂಗಳೂರು: ಕರ್ನಾಟಕ ವಿಧಾನ ಸಭಾ ಚುನಾವಣೆ ಕಾವು ರಂಗೇರುತ್ತಿರುವಂತೆಯೇ ಪುತ್ತೂರಿನ ಶಾಸಕ ಸಂಜೀವ ಮಠಂದೂರು ಅವರು ಮಹಿಳೆಯೊಬ್ಬರ ಜೊತೆ ಆಕ್ಷೇಪಾರ್ಹ ರೀತಿಯಲ್ಲಿರುವ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಇದನ್ನು ಅಲ್ಲಗೆಳೆದಿರುವ ಮಹಿಳೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಮಹಿಳೆ ನನ್ನ ವೈಯಕ್ತಿಕ ಫೋಟೋವನ್ನು ಪುತ್ತೂರಿನ ಶಾಸಕರ ಫೋಟೋದೊಂದಿಗೆ ಸೇರಿಸಿ ಎಡಿಟ್ ಮಾಡಿ ಹರಿಯ ಬಿಟ್ಟಿದ್ದಾರೆ. ಇದರಿಂದ ನನಗೆ ಮತ್ತು ಮನೆ ಮಂದಿಗೆ ತುಂಬಾ ನೋವಾಗಿದ್ದು, ಮಹಿಳೆಯಾಗಿ ನನ್ನ ಮೇಲೆ ಈ ದೌರ್ಜನ್ಯ ತಪ್ಪು ಎಂದು ಹೇಳಿರುವ ಅವರು ನನಗೂ ಶಾಸಕರಿಗೂ ಯಾವುದೇ ಸಂಬಂಧ ಇಲ್ಲ, ಯಾರು ವೈರಲ್ ಮಾಡಿದ್ದಾರೋ ಅವರಿಗೆ ಶಿಕ್ಷೆಯಾಗ ಬೇಕು ಎಂದು ಹೇಳಿದ್ದಾರೆ.
ವಿಡಿಯೋಗಾಗಿ ಇಲ್ಲಿ ಕ್ಲಿಕ್ ಮಾಡಿ