ಮಂಗಳೂರು: ಏ.23ರಂದು ಪಾಕಿಸ್ತಾನದ ರಾವಿ ನದಿ ನೀರು ಸೇರಿದಂತೆ ವಿಶ್ವದ 155 ದೇಶಗಳ ನದಿಗಳಿಂದ ತರಲಾದ ನೀರಿನಿಂದ ಅಯೋಧ್ಯೆಯಲ್ಲಿ ಶ್ರೀ ರಾಮನ ಜಲಾಭಿಷೇಕ ನಡೆಯಲಿದೆ.
ಈ ಕಾರ್ಯಕ್ರಮದಲ್ಲಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸೇರಿದಂತೆ ಹಲವರು ಭಾಗವಹಿಸಲಿದ್ದಾರೆ. ಪಾಕಿಸ್ತಾನದ ರಾವಿ ನದಿಯಿಂದ ಕಲಶದಲ್ಲಿ ತಂದ ನೀರನ್ನು ದುಬೈ ಮೂಲಕ ದೆಹಲಿಗೆ ತರಲಾಗಿದೆ. ಅದೇ ರೀತಿ ಉಳಿದ 154 ದೇಶದ ಪವಿತ್ರ ನದಿಗಳ ನೀರನ್ನು ತಂದು ಕಲಶದಲ್ಲಿ ಸಂಗ್ರಹಿಸಿಡಲಾಗಿದೆ.