ನಾರಿ ಮುನಿದರೆ ಮಾರಿ- ಕೈ ಹಿಡಿದ ಪತಿಯನ್ನೇ ಹತ್ಯೆಗೈದ ಪತ್ನಿ

ಮಂಗಳೂರು: ಮಹಿಳೆಯೊಬ್ಬಳು ಕೈ ಹಿಡಿದ ಪತಿಯನ್ನೇ ಕಡಿದು ಕೊಲೆಗೈದ ದಾರುಣ ಘಟನೆ ಕಾಸರಗೋಡಿನ ಪಾಣತ್ತೂರಿನಲ್ಲಿ ಎ.7ರಂದು ನಡೆದಿದೆ. ಪುತ್ತೂರಡ್ಕದ ಬಾಬು (54) ಮೃತ ಪಟ್ಟ ವ್ಯಕ್ತಿ. ಕೃತ್ಯಕ್ಕೆ ಸಂಬಂಧ ಪಟ್ಟಂತೆ ಪತ್ನಿ ಸೀಮಂತಿನಿನನ್ನು ಪೊಲೀಸರು  ಬಂಧಿಸಿದ್ದಾರೆ. ಗಂಡ ಹೆಂಡಿರ ಜಗಳ  ಕೃತ್ಯಕ್ಕೆ ಕಾರಣ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ. ದಿನಂಪ್ರತಿ ಪಾನಮತ್ತನಾಗಿ ಮನೆಗೆ ಬರುತ್ತಿದ್ದ ಬಾಬು ಎ.7ರಂದು  ಮನೆಗೆ ಬಂದ ಬಳಿಕ ಇಬ್ಬರ ನಡುವೆ ಕುಡಿತದ ವಿಚಾರದಲ್ಲಿ ಜಗಳವಾಗಿದೆ. ಈ ವೇಳೆ ಬಾಬು ಕತ್ತಿಯಿಂದ ಪತ್ನಿಯ ಮೇಲೆ ಹಲ್ಲೆ ನಡೆಸಿದ್ದಾನೆ. ಬಳಿಕ ಇದೇ ಕತ್ತಿಯಿಂದ ಪತ್ನಿ ಸೀಮಂತಿನಿ ಬಾಬುವನ್ನು ಕಡಿದು ಕೊಲೆಗೈದಿದ್ದಾಳೆ.

ಕಿರುಚಾಟ ಕೇಳಿ ಬಂದ ಸ್ಥಳೀಯರು ಬಾಬು ರಕ್ತದ ಮಡುವಿನಲ್ಲಿ ಬಿದ್ದಿರುವುದು ಕಂಡು ಬಂದಿದೆ. ತಕ್ಷಣ ರಾಜಾಪುರ ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕಾಗಾಮಿಸಿದ ಪೊಲೀಸರು ಸೀಮಂತಿನಿಯನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಗಾಯಗೊಂಡಿರುವ ಸೀಮಂತಿನಿಯನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

LEAVE A REPLY

Please enter your comment!
Please enter your name here