ಅಂತರಾಜ್ಯ ವಾಹನ ಕಳ್ಳ ಅಂಧರ್

ಮಂಗಳೂರು: ರಾ.ಹೆ 66ರ ಕೋಟೆಕಾರು ಬಳಿ ಪಿಕಪ್ ವಾಹನ ಕಳವು ನಡೆಸಿದ ಆರೋಪಿಯನ್ನು ಉಳ್ಳಾಲ ಪೊಲೀಸರು ಬಂಧಿಸಿದ್ದು, ಆತನಿಂದ ಪಿಕಪ್ ವಾಹನ ವಶಪಡಿಸಿಕೊಳ್ಳಲಾಗಿದೆ.

ಕೇರಳ ಮೇಲ್ಪರಂಬ ಮಾಂಗಡ್ ನಿವಾಸಿ ಅಹಮ್ಮದ್ ರಮ್ಸಾನ್ ಯಾನೆ ರಮ್ಸಾನ್ (26) ಬಂಧಿತ. ಜ.3 ರಂದು ಕೋಟೆಕಾರು ಸೌತ್ ಇಂಡಿಯಾ ಮರದ ಡಿಪೋ ಬಳಿ ನಿಲ್ಲಿಸಲಾಗಿದ್ದ ಪಿಕಪ್ ಕಳವಾಗಿತ್ತು. ಈ ಕುರಿತು ಮಾಲೀಕ ಮಹಮ್ಮದ್ ಶರೀಫ್ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ತನಿಖೆ ಕೈಗೆತ್ತಿಕೊಂಡ ಉಳ್ಳಾಲ ಪೊಲೀಸರು ಅಂತರಾಜ್ಯ ವಾಹನ ಕಳ್ಳರ ಜಾಡು ಹಿಡಿದು, ಆರೋಪಿ ರಮ್ಸಾನ್ ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಪಿಕಪ್ ವಾಹನ ಕಳವು ಬೆಳಕಿಗೆ ಬಂದಿದೆ. ಆರೋಪಿ ವಿರುದ್ದ ಉಳ್ಳಾಲ, ಬೆಳ್ತಂಗಡಿ, ಮಡಿಕೇರಿ, ಕೇರಳದ ಹೊಸದುರ್ಗ, ಕಾಸರಗೋಡು, ಕುಂಬಳೆ, ಬೇಡಗಂ, ಬೇಕಲ ಪೊಲೀಸ್ ಠಾಣೆಗಳಲ್ಲಿ ವಾಹನ ಕಳವು ಪ್ರಕರಣಗಳು ದಾಖಲಾಗಿವೆ.

LEAVE A REPLY

Please enter your comment!
Please enter your name here