ಯುವತಿಗೆ ಗುಪ್ತಾಂಗ ಪ್ರದರ್ಶನ – ಆರೋಪಿ ಬಂಧನ 

ಮಂಗಳೂರು: ಕೆಎಸ್ಆರ್ ಟಿ ಸಿ ಬಸ್ಸಿನಲ್ಲಿ ಯುವತಿಯೊಬ್ಬಳಿಗೆ ತನ್ನ ಗುಪ್ತಾಂಗ ಪ್ರದರ್ಶಿಸಿದ ಆರೋಪದ ಮೇಲೆ 52 ವರ್ಷದ ವ್ಯಕ್ತಿಯೋರ್ವನನ್ನು ಕೇರಳದ ಕರುಮಾನ ಪೊಲೀಸರು ಬಂಧಿಸಿದ್ದಾರೆ.

ಬಂಧಿತ ವ್ಯಕ್ತಿಯನ್ನು ಕರಮಾನದ ಚುಲ್ಲಮುಕುವಿನ ಮುಂಡಪ್ಲವಿಲ ವೀಟಿಲ್ ನಿವಾಸಿ ಜಯನ್ ಎಂದು ಗುರುತಿಸಲಾಗಿದೆ. ನೆಮ್ಮಮ್ ಬಸ್ ನಿಲ್ದಾಣದಲ್ಲಿ ಬಸ್ಸನ್ನೇರಿದ ಯುವತಿಗೆ ಪಕ್ಕದ ಸೀಟ್ನಲ್ಲಿದ್ದ ಜಯನ್ ತನ್ನ ಗುಪ್ತಾಂಗ ತೋರಿಸಿದ್ದನ್ನು ಯುವತಿ ಆರಂಭದಲ್ಲಿ ನಿರ್ಲಕ್ಷಿಸಿದ್ದಾಳೆ. ಆದರೆ ಆರೋಪಿ ಕೃತ್ಯ ಮುಂದುವರಿಸಿದ್ದಾನೆ. ಇದರಿಂದ ಆಕ್ರೋಶಗೊಂಡ ಯುವತಿ ಬಸ್ ಸಿಬ್ಬಂದಿಗಳಿಗೆ ಮಾಹಿತಿ ನೀಡಿದ್ದಾಳೆ. ಸಿಬ್ಬಂದಿ ನೀಡಿದ ಮಾಹಿತಿ ಮೇರೆಗೆ ಸ್ಥಳಕ್ಕಾಗಮಿಸಿದ ಪೊಲೀಸರು ಯುವತಿಯ ಹೇಳಿಕೆ ಪಡೆದು ಜಯನ್ ನನ್ನು ಬಂಧಿಸಿ ಪ್ರಕರಣ ದಾಖಲಿಸಿದ್ದಾರೆ.

LEAVE A REPLY

Please enter your comment!
Please enter your name here