ಮಂಗಳೂರು: ಸಿಂಗಾಪುರದ ಸರಕಾರಿ ಸ್ವಾಮ್ಯದ ಟೆಮಾಸೆಕ್ ಹೋಲ್ಡಿಂಗ್ಸ್ ಕಂಪನಿಯು ಕರ್ನಾಟಕದ ಮಣಿಪಾಲ್ ಹೆಲ್ತ್ ಎಂಟರ್ಪ್ರೈಸ್ ನ ಶೇಕಡ 59 ರಷ್ಟು ಷೇರುಗಳನ್ನು ಖರೀದಿಸಿದ್ದಾಗಿ ಎಕನಾಮಿಕ್ ಟೈಮ್ಸ್ ವರದಿ ಮಾಡಿದೆ.
ಸುಮಾರು 40 ಸಾವಿರ ಕೋಟಿ ರೂಪಾಯಿಗಳಿಗೆ ಈ ಖರೀದಿ ಒಪ್ಪಂದ ನಡೆದಿದೆ. ಈ ಖರೀದಿ ಬಳಿಕ ಮಣಿಪಾಲ್ ಹೆಲ್ತ್ ಎಂಟರ್ಪ್ರೈಸಸ್ ನ ಪ್ರವರ್ತಕ ರಂಜನ್ ಪೈ ಮತ್ತು ಅವರ ಕುಟುಂಬದ ಬಳಿ ಶೇಕಡ 30ರಷ್ಟು ಷೇರುಗಳು ಮಾತ್ರ ಬಾಕಿ ಉಳಿದಿದೆ. ಡಿಪಿಜಿ ಇಂಕ್ ಬಳಿ ಶೇಖಡ 11ರಷ್ಟು ಶೇರುಗಳಿವೆ. ಮಣಿಪಾಲ್ ಹಾಸ್ಪಿಟಲ್, ಭಾರತದ ಆರೋಗ್ಯ ವಲಯದಲ್ಲಿ ಮುಂಚೂಣಿಯಲ್ಲಿರುವ ಸಂಸ್ಥೆಗಳಲ್ಲಿ ಒಂದಾಗಿದ್ದು ಮಣಿಪಾಲ್ ಹೆಲ್ತ್ ಎಂಟರ್ಪ್ರೈಸಸ್ ನ ಬಹುತೇಕ ಶೇರುಗಳನ್ನು ಟೆಮಾಸೆಕ್
ಹೋಲ್ಡಿಂಗ್ಸ್ ಖರೀದಿ ಮಾಡಿದಂತಾಗಿದೆ. ಉಡುಪಿಯ ಮಣಿಪಾಲ ಮೂಲದ ಪೈ ಕುಟುಂಬವು ಭಾರತದ ಮೊದಲ ಖಾಸಗಿ ಮೆಡಿಕಲ್ ಕಾಲೇಜನ್ನು ಕರ್ನಾಟಕದ ಮಣಿಪಾಲದಲ್ಲಿ 1953ರಲ್ಲಿ ಆರಂಭಿಸಿತ್ತು.