ಗಜ ಪ್ರಸವದಂತಾದ ಬಿಜೆಪಿ ಅಭ್ಯರ್ಥಿಗಳ ಪಟ್ಟಿ

ಮಂಗಳೂರು : ಭಾರತೀಯ ಜನತಾ ಪಕ್ಷ ರಾಜ್ಯದಲ್ಲಿ ಹತ್ತಾರು ಸಭೆ, 5 ಸಮೀಕ್ಷೆಗಳ ಮೂಲಕ ತಯಾರು ಮಾಡಿದ್ದ ಸಂಭಾವ್ಯರ ಪಟ್ಟಿಯನ್ನು ಮೋದಿ ನೇತೃತ್ವದಲ್ಲಿ ನಡೆದ ಬಿಜೆಪಿ ಸಂಸದೀಯ ಮಂಡಳಿ ಸಭೆ ಪರಿಶೀಲಿಸಿ ಒಂದು ಅಂತಿಮ ಪಟ್ಟಿ ಸಿದ್ದ ಪಡಿಸಿದೆ. ಶನಿವಾರ ಮಧ್ಯಾಹ್ನದಿಂದ ಮಧ್ಯರಾತ್ರಿವರೆಗೂ ಬಿಜೆಪಿ ಸಂಸದೀಯ ಮಂಡಳಿ ಸಭೆ ನಡೆದಿತ್ತು.

ರಾಜ್ಯ ಪ್ರವಾಸ ಮುಗಿಸಿ ದೆಹಲಿಗೆ ಹಿಂದಿರುಗಿದ ಮೋದಿ ಸಮ್ಮುಖದಲ್ಲಿ ಬಿಜೆಪಿ ಕೇಂದ್ರ ಚುನಾವಣಾ ಸಮಿತಿ ಸಭೆ ನಡೆಯಿತು. ಇಂದು ಸಂಜೆ ಒಳಗಾಗಿ ಬಿಜೆಪಿಯ ಮೊದಲ ಪಟ್ಟಿ ಪ್ರಕಟವಾಗುವ ನಿರೀಕ್ಷೆ ಇದೆ. ಅಭ್ಯರ್ಥಿಗಳ ಆಯ್ಕೆಗೆ ಗುಜರಾತ್ ಮಾಡೆಲ್ ಅನುಸರಿಸಲಾಗಿದೆ ಎನ್ನಲಾಗಿದೆ. ಅಭ್ಯರ್ಥಿಗಳ ಮೊದಲ ಪಟ್ಟಿ ಅಂತಿಮವಾಗಿದ್ದು 85ಕ್ಕೂ ಹೆಚ್ಚು ಹಾಲಿ ಶಾಸಕರ ಕ್ಷೇತ್ರಗಳು ಕ್ಲಿಯರ್ ಆಗಿವೆ ಎಂದು ಮೂಲಗಳು ತಿಳಿಸಿವೆ.

ಸಿಎಂ ಬೊಮ್ಮಾಯಿ ಸೇರಿದಂತೆ ಸಚಿವ ಸಂಪುಟದ 21 ಸಚಿವರ ಹೆಸರು ಯಾವುದೇ ಚರ್ಚೆಯಿಲ್ಲದೆ ಕ್ಲಿಯರ್ ಮಾಡಲಾಗಿದೆ ಎಂದು ತಿಳಿದು ಬಂದಿದೆ.

ಬಸವರಾಜ ಬೊಮ್ಮಾಯಿ – ಶಿಗ್ಗಾವಿ

ಗೋವಿಂದ ಕಾರಜೋಳ – ಮುಧೋಳ

ಮಾಧುಸ್ವಾಮಿ – ಚಿಕ್ಕನಾಯಕನಹಳ್ಳಿ

ಅಶೋಕ್ – ಪದ್ಮನಾಭನಗರ

ಶ್ರೀರಾಮುಲು – ಬಳ್ಳಾರಿ ಗ್ರಾಮೀಣ

ಡಾ ಸಿ ಅಶ್ವತ್ ನಾರಾಯಣ್ – ಮಲ್ಲೇಶ್ವರಂ

ಸಿಸಿ ಪಾಟೀಲ್ – ನರಗುಂದ

ಮುರುಗೇಶ್ ನಿರಾಣಿ – ಬೀಳಗಿ

ಸುನಿಲ್ ಕುಮಾರ್ – ಕಾರ್ಕಳ

ಬಿ ಸಿ ನಾಗೇಶ್ – ತಿಪಟೂರು

ಶಂಕರ್ ಪಾಟೀಲ್ ಮುನೇನಕೊಪ್ಪ – ನವಲಗುಂದ

ಶಶಿಕಲಾ ಜೊಲ್ಲೆ – ನಿಪ್ಪಾಣಿ

ಪ್ರಭು ಚೌಹಾಣ್ – ಔರಾದ್

ಡಾ. ಕೆ ಸುಧಾಕರ್- ಚಿಕ್ಕಬಳ್ಳಾಪುರ

ಆನಂದ್ ಸಿಂಗ್ – ವಿಜಯನಗರ

ಮುನಿರತ್ನ – ರಾಜರಾಜೇಶ್ವರಿ ನಗರ

ಎಸ್ ಟಿ ಸೋಮಶೇಖರ್- ಯಶವಂತಪುರ

ಬೈರತಿ ಬಸವರಾಜ್ – ಕೆಆರ್ ಪುರಂ

ಗೋಪಾಲಯ್ಯ- ಮಹಾಲಕ್ಷ್ಮಿ ಬಡಾವಣೆ

ಶಿವರಾಮ್ ಹೆಬ್ಬಾರ್ – ಯಲ್ಲಾಪುರ

ಬಿ ಸಿ ಪಾಟೀಲ್ – ಹಿರೇಕೆರೂರು

ನಾರಾಯಣಗೌಡ – ಕೆ ಆರ್ ಪೇಟೆ

ಉಳಿದಂತೆ ಸೋಮಣ್ಣ, ಹಾಲಪ್ಪ ಆಚಾರ್, ಅರಗ ಜ್ಞಾನೇಂದ್ರ, ಎಂ ಟಿ ಬಿ ನಾಗರಾಜ್, ಅಂಗಾರ ಅವರ ಅಭ್ಯರ್ಥಿತನದ ಬಗ್ಗೆ ಇನ್ನೂ ಅಂತಿಮವಾಗಿಲ್ಲ.
ಗೋವಿಂದ ಕಾರಜೋಳ, ಈಶ್ವರಪ್ಪ, ಸೋಮಣ್ಣ ಹಾಗೂ ಜಗದೀಶ್ ಶೆಟ್ಟರ್ ಅವರಿಗೆ ಟಿಕೆಟ್ ಪಕ್ಕ ಎನ್ನಲಾಗಿದ್ದು ವಯಸ್ಸಿನ ಕಾರಣ ಕೆಲವರಿಗೆಷ್ಟೇ ಅನ್ವಯವಾಗುತ್ತದೆ ಎಂದು ಅಮಿತ್ ಶಾ ಸಂದೇಶ ರವಾನಿಸಿದ್ದಾರೆ. ಈ ಮೂಲಕ ಘಟಾನುಘಾಟಿಗಳನ್ನು ಬದಿಗೆ ಸರಿಸದಿರಲು ಹೈಕಮಾಂಡ್ ನಿರ್ಧರಿಸಿದೆ ಎನ್ನಲಾಗಿದೆ. ಸಭೆಯಲ್ಲಿ ತಮ್ಮ ಆಪ್ತರ ಪರವಾಗಿ ಯಡಿಯೂರಪ್ಪ ಬ್ಯಾಟಿಂಗ್ ಮಾಡಿದ್ದು ಪುತ್ರನ ಬಗ್ಗೆ ಯಾವುದೇ ವಿಚಾರವನ್ನು ಪ್ರಸ್ತಾಪಿಸಿರಲಿಲ್ಲ. ಈ ವೇಳೆ ಶಿಕಾರಿಪುರ ಕ್ಷೇತ್ರಕ್ಕೆ ವಿಜಯೇಂದ್ರ ಹೆಸರನ್ನು ಜೆಪಿ ನಡ್ಡ ಪ್ರಸ್ತಾಪಿಸಿದರು ಎಂದು ಮೂಲಗಳು ತಿಳಿಸಿದೆ.

ವಿಡಿಯೋಗಾಗಿ ಇಲ್ಲಿ ಕ್ಲಿಕ್ ಮಾಡಿ

 

LEAVE A REPLY

Please enter your comment!
Please enter your name here