ಮಂಗಳೂರು: ಮೈಸೂರು ಮೂಲದ ಶ್ರವಣ ಕುಮಾರ್ , ತಾಯಿ ರತ್ನಚೂಡ ಅವರನ್ನು ತಮ್ಮ 20 ವರ್ಷಗಳಿಗೂ ಹಳೆಯದಾದ ಬಜಾಜ್ ಚೇತಕ್ ಸ್ಕೂಟರ್‌ನಲ್ಲಿ ತೀರ್ಥಯಾತ್ರೆ ಮಾಡುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಈಗಾಗಲೇ ಇವರು ಸುಮಾರು 66,000 ಕಿ.ಮೀ.ಗಳಷ್ಟು ಪ್ರಯಾಣ ಪೂರೈಸಿದ್ದಾರೆ.
ತೀರ್ಥಯಾತ್ರೆಯ ವೇಳೇ ಕೇವಲ ಭಾರತವಲ್ಲದೆ ನೇಪಾಳ, ಭೂತಾನ್ ಮತ್ತು ಮ್ಯಾನ್ಮಾರ್ ದೇಶಗಳ ದೇವಾಲಯಗಳಿಗೂ ಭೇಟಿ ನೀಡಿದ್ದಾರೆ. ಇಬ್ಬರೂ ಕಳೆದ ಗುರುವಾರ ಚಿತ್ರಕೂಟದಿಂದ ಪ್ರಯಾಗರಾಜ್‌ಗೆ ತಲುಪಿದ್ದು, ಶುಕ್ರವಾರ ಸಂಜೆ ವಾರಣಾಸಿಗೆ ಪ್ರಯಾಣ ಬೆಳೆಸಿದ್ದಾರೆ. ವೃದ್ಧಾಪ್ಯದಲ್ಲಿ ಮಕ್ಕಳನ್ನೇ ಅವಲಂಬಿಸಿರುವ ತಂದೆ ತಾಯಿಗಳ ಆಸೆಗಳನ್ನು ಪೂರೈಸಿ ಕೊಡುವುದು ಮಕ್ಕಳ ಕರ್ತವ್ಯ. ಅಂತಹ ಒಂದು ವಿಶಿಷ್ಟವಾದ ತಾಯಿ ಮಗನ ಜೋಡಿ ಇದೀಗ ಎಲ್ಲರ ಗಮನ ಸೆಳೆದಿದೆ.