ಆಗ ನಾಟು ನಾಟು…… ಈಗ ಮೋದಿ ಮೋದಿ…..

ಮಂಗಳೂರು: ವಿಶ್ವದ ಅತ್ಯಂತ ಪ್ರಸಿದ್ಧಿ ಪಡೆದಿರುವ ನಾಟು ನಾಟು ಹಾಡು ಕರ್ನಾಟಕ ವಿಧಾನ ಸಭಾ ಚುನಾವಣೆಗೆ ಬಳಕೆಯಾಗುತ್ತಿದೆ. ಪ್ರಧಾನಿ ಮೋದಿಯವರ ಮೆಚ್ಚುಗೆಗೆ ಪಾತ್ರವಾಗಿದ್ದ ಈ ಹಾಡನ್ನು ಮೋದಿ- ಮೋದಿ ಎನ್ನುವ ಸಾಹಿತ್ಯಕ್ಕೆ ಬದಲಾಯಿಸಲಾಗಿದ್ದು ಹಾಡು ಎಲ್ಲೆಡೆ ವೈರಲ್‌ ಆಗುತ್ತಿದೆ.

ಕರ್ನಾಟಕ ವಿಧಾನಸಭೆ ಚುನಾವಣೆ ಪ್ರಚಾರಕ್ಕೆ ಪೂರಕವಾಗಿ ಭಾರತೀಯ ಜನತಾ ಪಕ್ಷದ ಯುವ ಮೋರ್ಚಾ ಕಾರ್ಯಕರ್ತರು ನಾಟು ನಾಟು ಹಾಡಿನ ಧಾಟಿಯಲ್ಲಿ ಮೋದಿ- ಮೋದಿ ಹಾಡನ್ನು ಸಂಯೋಜಿಸಿದ್ದಾರೆ.ಹಾಡಿಗೆ ತಕ್ಕಂತೆ  ಹೆಜ್ಜೆ ಹಾಕಲಾಗಿದ್ದು ಕೇಂದ್ರ ಸಚಿವ ಶೋಭ ಕರಂದ್ಲಾಜೆ ಅವರು ವಿಡಿಯೋವನ್ನು ಟ್ವೀಟ್ಟರ್‌ ಖಾತೆಯಲ್ಲಿ ಶೇರ್ ಮಾಡಿದ್ದಾರೆ.

ವಿಡಿಯೋಗಾಗಿ ಇಲ್ಲಿ ಕ್ಲಿಕ್‌ ಮಾಡಿ

LEAVE A REPLY

Please enter your comment!
Please enter your name here