ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ರಾಜ್ಯದಲ್ಲಿ ನಂ.1

ಮಂಗಳೂರು (ಸುಬ್ರಹ್ಮಣ್ಯ): ನಾಗಾರಾಧನೆಗೆ ಪ್ರಸಿದ್ಧಿ ಪಡೆದ ದ.ಕನ್ನಡದ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಈ ಬಾರಿಯೂ 123 ಕೋಟಿ ರೂಪಾಯಿ ಆದಾಯ ಗಳಿಸುವ ಮೂಲಕ ರಾಜ್ಯದಲ್ಲಿ ನಂಬರ್ ಒನ್ ಸ್ಥಾನ ಪಡೆದಿದೆ.

2022 ಏಪ್ರಿಲ್ ನಿಂದ 2023 ಮಾರ್ಚ್ 31ರವರೆಗಿನ ಆರ್ಥಿಕ ವರ್ಷದಲ್ಲಿ 123,64,49,480 ರೂಪಾಯಿ ಆದಾಯ ಗಳಿಸಿದೆ. ಕೊರೋನಾ ಕಾಲದಲ್ಲಿ ಭಕ್ತರ ಪ್ರವೇಶಕ್ಕೆ ನಿರ್ಬಂಧವಿದ್ದ ಕಾರಣಕ್ಕೆ 2021-22ರ ನೇ ಸಾಲಿನಲ್ಲಿ 72,23,23,758 ರೂಪಾಯಿ ಆದಾಯ ಪಡೆದಿತ್ತು. 2007ರಿಂದ ಹೆಚ್ಚಿನ ಅದಾಯ ಪಡೆಯುವ ಮೂಲಕ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ರಾಜ್ಯದ ಶ್ರೀಮಂತರ ದೇವಸ್ಥಾನವಾಗಿ ಗುರುತಿಸಿಕೊಂಡಿದೆ.

LEAVE A REPLY

Please enter your comment!
Please enter your name here