ಮಂಗಳೂರು (ಮುಂಬೈ): ಏಪ್ರಿಲ್ 16 ಭಾರತೀಯ ರೈಲ್ವೇಗೆ ವಿಶೇಷವಾದ ದಿನ. ಕಾರಣವಿಷ್ಟೇ 16 ಕ್ಕೆ ಭಾರತೀಯ ರೈಲ್ವೆ 170 ವರ್ಷ ತುಂಬಿದೆ.
ಏ.16, 1853 ರಂದು ಭಾರತದಲ್ಲಿ ಮೊದಲ ಬಾರಿ ರೈಲು ಸಂಚಾರ ಆರಂಭಗೊಂಡಿತ್ತು. ಅಂದಿನ ಮುಂಬೈ ಗವರ್ನರ್ ಜಾನ್ ಎಲ್ಸಿನ್ ಸ್ಟೋನ್ ಮುಂಬೈ ಬೊರಿಬಂದರ್ ರೈಲು ನಿಲ್ದಾಣದಿಂದ ಥಾಣೆಗೆ ರೈಲು ಸಂಚಾರಕ್ಕೆ ಚಾಲನೆ ನೀಡಿದ್ದರು. 21 ಕುಶಾಲು ತೋಪು ಸಿಡಿಸಿ ಗೌರವ ಸೂಚಿಸಲಾಯಿತು. ಬೊರಿಬಂದರ್ ನಿಂದ ಥಾಣೆ ಮಧ್ಯದ 34 ಕಿ.ಮೀ ದೂರ ಕ್ರಮಿಸಲು ಅಂದು ಒಂದು ಒಂದೂವರೆ ಗಂಟೆ ಸಮಯ ತಗುಲಿತ್ತು.