ಮಂಗಳೂರು : ರಾಜ್ಯದ ನೂತನ ಮುಖ್ಯಮಂತ್ರಿ ಆಯ್ಕೆ ಇನ್ನೂ ಪೂರ್ಣಗೊಂಡಿಲ್ಲವಾದ ಕಾರಣ ನಾಳೆ ಪ್ರಮಾಣವಚನ ನಡೆಯುವುದಿಲ್ಲ ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲ ಹೇಳಿದ್ದಾರೆ.
ಸಿ.ಎಂ ಆಯ್ಕೆ ವಿಚಾರಕ್ಕೆ ಸಂಬಂಧಿಸಿದಂತೆ ಉದ್ದೇಶ ಪೂರ್ವಕವಾಗಿ ವದಂತಿ ಹರಡಲಾಗುತ್ತಿದ್ದು ಇದಕ್ಕೆ ಕಿವಿಕೊಡಬೇಡಿ ಎಂದು ಸುರ್ಜೇವಾಲ ಹೇಳಿದ್ದಾರೆ.
ಕಗ್ಗಂಟಾಗಿರುವ ಹೊಸ ಸಿಎಂ ಆಯ್ಕೆ ವಿಚಾರವನ್ನು ಎಪಿಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೆಗಲಿಗೆ ಹಾಕಲಾಗಿದೆ. ಈ ನಡುವೆ ಪ್ರಿಯಾಂಕಗಾಂಧಿ ಕೂಡಾ ಸಂಧಾನ ಮಾತುಕತೆ ನಡೆಸಲಿದ್ದಾರೆ. ಸಿಎಂ ಆಯ್ಕೆ ಹೊಣೆಯನ್ನು ಖರ್ಗೆಗೆ ವಹಿಸಲಾಗಿದ್ದು, ಇಂದು ಅಥವಾ ನಾಳೆ ಅಂತಿಮ ತೀರ್ಮಾನ ಕೈ ಗೊಳ್ಳಲಿದ್ದಾರೆ ಎಂದು ಹೇಳಿರುವ ಸುರ್ಜೇವಾಲ ಕಾಂಗ್ರೆಸ್ ನೀಡಿದ ಎಲ್ಲಾ ಗ್ಯಾರಂಟಿಗಳನ್ನು ಜಾರಿಗೊಳ್ಳಲಿದೆ ಎಂದು ಹೇಳಿದ್ದಾರೆ.