ಬಂಡೆಗೆ ಢಿಕ್ಕಿ ಹೊಡೆದ ಮೀನುಗಾರಿಕೆ ಬೋಟ್‌ – 7 ಮಂದಿ ರಕ್ಷಣೆ

ಮಲ್ಪೆ: ಭಟ್ಕಳ ನೇತ್ರಾಣಿ ಸಮೀಪ ಬಂಡೆಗೆ ಢಿಕ್ಕಿ ಹೊಡೆದು ಮೀನುಗಾರಿಕೆಗೆ ತೆರಳಿದ್ದ ಬೋಟೊಂದು ಮುಳುಗಡೆಗೊಂಡಿದೆ. ಬೋಟ್ ನಲ್ಲಿದ್ದ ಏಳು ಮಂದಿ ಮೀನುಗಾರರನ್ನು ರಕ್ಷಿಸಲಾಗಿದೆ.

ಉದ್ಯಾವರ ಸಂಪಿಗೆನಗರದ ರಾಹಿಲ್ ಎಂಬವರಿಗೆ ಸೇರಿದ ಸೀ ಬರ್ಡ್ ಬೋಟು ಮೇ 21ರಂದು ರಾತ್ರಿ 7 ಮಂದಿ ಮೀನುಗಾರರೊಂದಿಗೆ ಮಲ್ಪೆ ಬಂದರಿನಿಂದ ಆಳಸಮುದ್ರ ಮೀನುಗಾರಿಕೆಗೆ ತೆರಳಿತ್ತು. ಮೇ 22ರಂದು ಬೆಳಗ್ಗೆ ಭಟ್ಕಳ ನೇತ್ರಾಣಿ ಸಮೀಪ ಮೀನುಗಾರಿಕೆ ನಡೆಸುತ್ತಿದ್ದ ವೇಳೆ ಭಾರೀ ಮಳೆ ಗಾಳಿಗೆ ಸಿಲುಕಿದ ಬೋಟ್‌ ನಿಯಂತ್ರಣ ತಪ್ಪಿ ಕಲ್ಲು ಬಂಡೆಗೆ ಢಿಕ್ಕಿ ಹೊಡೆದಿದೆ. ಇದರಿಂದ ಬೋಡ್‌ ಗೆ ಹಾನಿಯಾಗದ್ದು, ಸಮುದ್ರ ಮಧ್ಯದಲ್ಲಿಯೇ ಮುಳುಗಲಾರಂಭಿಸಿದೆ. ಮಾಹಿತಿ ತಿಳಿದ ಸಮೀಪದಲ್ಲಿದ್ದ ಇನ್ನೊಂದು ಮೀನುಗಾರಿಕಾ ಬೋಟಿನವರು ಧಾವಿಸಿ ಬಂದು, ಮುಳುಗುತ್ತಿದ್ದ ಬೋಟ್‌ ನಲ್ಲಿದ್ದವರನ್ನು ರಕ್ಷಿಸಿದ್ದಾರೆ. ಬೋಟನ್ನು ಹಗ್ಗದ ಸಹಾಯದಿಂದ ಎಳೆದು ತರಲು ಪ್ರಯತ್ನ ಪಟ್ಟರೂ ಹಗ್ಗ ತುಂಡಾಗಿ ಬೋಟು ಸಂಪೂರ್ಣ ಮುಳುಗಿದೆ. ಬೋಟಿನಲ್ಲಿದ್ದ ಏಳೂ ಮಂದಿಯನ್ನು ಮಲ್ಪೆ ಬಂದರಿಗೆ ಕರೆ ತರಲಾಗಿದೆ. ಘಟನೆಯಿಂದ ಸುಮಾರು 45 ಲಕ್ಷ ರೂ. ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ.

LEAVE A REPLY

Please enter your comment!
Please enter your name here