ಮಂಗಳೂರು: ದ.ಕ ಜಿಲ್ಲೆಯ ಕರಾವಳಿಯಲ್ಲಿ ಮೋಟಾರೀಕೃತ ದೋಣಿ ಅಥವಾ ಸಂಪ್ರದಾಯಿಕ ದೋಣಿ ಬಳಸಿ, ಕೈಗೊಳ್ಳುವ ಮೀನುಗಾರಿಕಾ ಚಟುವಟಿಕೆಯನ್ನು ಜೂನ್1ರಿಂದ ಜುಲೈ 31ರ ವರೆಗೆ ನಿಷೇಧಿಸಲಾಗಿದೆ. 10 ಅಶ್ವಶಕ್ತಿಗಿಂತ ಕಡಿಮೆ ಸಾಮರ್ಥ್ಯದ ಮೋಟಾರ್ ಇಂಜಿನ್ ಬಳಸುವ ಸಾಂಪ್ರಾದಾಯಿಕ ನಾಡದೋಣಿಗಳಲ್ಲಿ ಮೀನುಗಾರಿಕೆ ಅನುಮತಿ ನೀಡಲಾಗಿದೆ.
ಆದೇಶ ಉಲ್ಲಂಘಿಸುವ ಮೀನುಗಾರಿಕಾ ದೋಣಿಗಳು ಮತ್ತು ಮೀನುಗಾರರು ಕರ್ನಾಟಕ ಕಡಲ ಮೀನುಗಾರಿಕಾ ಕಾಯ್ದೆ-1986 ರಂತೆ ದಂಡನೆ ವಿಧಿಸಲಾಗುವುದು ಮತ್ತು ಒಂದು ವರ್ಷದ ಅವಧಿಗೆ ಡೀಸೆಲ್ ಮೇಲಿನ ಸಹಾಯಧನ ಪಡೆಯಲು ಅನರ್ಹರಾಗುವರು ಎಂದು ಮೀನುಗಾರಿಕಾ ಇಲಾಖೆ ಪ್ರಕಟನೆಯಲ್ಲಿ ತಿಳಿಸಿದೆ.