ಭಾರತೀಯ ಮೂಲದ ಯುವಕನಿಂದ ಅಮೇರಿಕಾದ ವೈಟ್‌ ಹೌಸ್‌ ಮೇಲೆ ದಾಳಿ

ಮಂಗಳೂರು: ನಾಝೀ ಸ್ವಸ್ಥಿಕ್‌ ಧ್ವಜ ಹಿಡಿದು ಟ್ರಕ್‌ ಬಳಸಿ ಹಿಟ್ಲರ್‌ ಭಕ್ತ ಎನ್ನಲಾದ ಭಾರತೀಯ ಮೂಲದ ಸಾಯಿ ವರ್ಷಿತ್‌ ಕುಂಡಾಲ (19) ರಕ್ಷಣಾ ಬೇಲಿ ದಾಟಿ ವೈಟ್‌ಹೌಸ್‌ ಮೇಲೆ ದಾಳಿ ನಡೆಸಲು ಯತ್ನಿಸಿದ್ದು, ಆತನನ್ನು ಬಂಧಿಸಲಾಗಿದೆ. ಆತನಿಂದ ನಾಝೀ  ಧ್ವಜ ಮತ್ತು ಮಾರಾಕಾಸ್ತ್ರವನ್ನು ವಶಪಡಿಸಿಕೊಳ್ಳಲಾಗಿದೆ. ದಾಳಿ ವೇಳೆ ವೈಟ್‌ಹೌಸ್‌ ನ ಸೀಕ್ರೆಟ್‌ ಸರ್ವಿಸ್‌ ವ್ಯಕ್ತಿಯೊಬ್ಬರು ಗಾಯಗೊಂಡಿದ್ದಾರೆ ಎನ್ನಲಾಗಿದೆ. ಅಮೇರಿಕಾದ ಅಧ್ಯಕ್ಷರನ್ನು ಕೊಲ್ಲುವ ಉದ್ದೇಶದಿಂದ ದಾಳಿ ನಡೆಸಿರುವುದಾಗಿ ಮತ್ತು ಸ್ವತಃ ಅಧಿಕಾರದಲ್ಲಿ ಕುಳಿತು ಕೊಳ್ಳುವ ಯೋಚನೆಯಿಂದ ಈ ಕೃತ್ಯ ಎಸಗಿರುವುದಾಗಿ ಆರೋಪಿ ಹೇಳಿದ್ದಾನೆ.

ದಾಳಿಯ ವೇಳೆ ಅಮೇರಿಕಾ ಅಧ್ಯಕ್ಷ ಬೈಡಾನ್ ವೈಟ್‌ ಹೌಸ್‌ ನಲ್ಲಿದ್ದರೇ ಇಲ್ಲವೇ ಎನ್ನುವುದನ್ನು ಬಹಿರಂಗ ಪಡಿಸಿಲ್ಲ.

ವಿಡಿಯೋಗಾಗಿ ಇಲ್ಲಿ ಕ್ಲಿಕ್‌ ಮಾಡಿ

LEAVE A REPLY

Please enter your comment!
Please enter your name here