ಒಡಿಶಾ ರೈಲು ದುರಂತ – ರೈಲ್ವೆ ಸಚಿವರ ರಾಜೀನಾಮೆಗೆ ಆಗ್ರಹ

ಮಂಗಳೂರು: ಶುಕ್ರವಾರ ಒಡಿಶಾದಲ್ಲಿ ಸಂಭವಿಸಿದ ಭೀಕರ ರೈಲು ಅಪಘಾತದ ಬಳಿಕ ದೇಶದ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರ ರಾಜೀನಾಮೆಗೆ ಬೇಡಿಕೆಗಳು ಹೆಚ್ಚತೊಡಗಿವೆ. ಈ ಅಪಘಾತ ಹಲವು ವರ್ಷಗಳಲ್ಲಿ ದೇಶದಲ್ಲಿ ಸಂಭವಿಸಿದ ಅತ್ಯಂತ ವಿನಾಶಕಾರಿ ದುರಂತಗಳಲ್ಲೊಂದಾಗಿದ್ದು ಕನಿಷ್ಠ 280ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದು ಸಾವಿರಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.

ಸರಕಾರವು ಕೇವಲ ಐಷಾರಾಮಿ ರೈಲುಗಳ ಮೇಲೆ ಗಮನವನ್ನು ಕೇಂದ್ರೀಕರಿಸುತ್ತಿದೆ ಮತ್ತು ಸಾಮಾನ್ಯ ಜನರು ಪ್ರಯಾಣಿಸುವ ರೈಲುಗಳನ್ನು ಮತ್ತು ಮಾರ್ಗಗಳನ್ನು ನಿರ್ಲಕ್ಷಿಸುತ್ತಿದೆ ಎಂದು ಟ್ವೀಟರ್ ನಲ್ಲಿ ಸಿಪಿಐ ಸಂಸದ ಬಿನೋಯ್ ವಿಶ್ವಮ್ ಆರೋಪಿಸಿದ್ದಾರೆ. ಒಡಿಶಾ ಸಾವುಗಳು ಇದರ ಫಲ ಶ್ರುತಿಯಾಗಿದ್ದು ರೈಲ್ವೆ ಸಚಿವರು ರಾಜೀನಾಮೆ ನೀಡಬೇಕು ಎಂದು ಅವರು ಆಗ್ರಹಿಸಿದ್ದಾರೆ.

LEAVE A REPLY

Please enter your comment!
Please enter your name here