ಮಂಗಳೂರು: ಒಡಿಶಾದ ಬಾಲಸೂರ್ ನಲ್ಲಿ ಸಂಭವಿಸಿದ ಭೀಕರ ರೈಲು ದುರಂತ ಇಡೀ ದೇಶವನ್ನು ಬೆಚ್ಚಿ ಬೀಳಿಸಿದೆ. 10 ನಿಮಿಷಗಳ ನಡುವೆ ಮೂರು ರೈಲುಗಳ ಮಧ್ಯೆ ಅಪಘಾತ ಸಂಭವಿಸಿ 288 ಜನರನ್ನು ಬಲಿ ಪಡೆದಿದೆ.
ತಮ್ಮ ಮನೆ, ಕಾರ್ಯಕ್ಷೇತ್ರವನ್ನು ತಲುಪುವ ಕನಸು ಕಾಣುತ್ತಾ ಪ್ರಯಾಣಿಸುತ್ತಿದ್ದ ಪ್ರಯಾಣಿಕರು ಮತ್ತೆಂದೂ ಬಾರದೂರಿಗೆ ಪ್ರಯಾಣಿಸಿದ್ದಾರೆ. ಇಷ್ಟೊಂದು ಜನರು ಜೀವತೆತ್ತ ನೋವಿನ ನಡುವೆ, ಸಾವನ್ನಪ್ಪಿದ ಜನರನ್ನು ಸಾಗಿಸುವ ವಿಡಿಯೋವೊಂದು ವೈರಲ್ ಆಗಿದ್ದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಸತ್ತ ಮೇಲೂ ಮೃತ ದೇಹಕ್ಕೆ ಗೌರವಯುತವಾಗಿ ಸಂಸ್ಕಾರ ಮಾಡುವ ನಾಗರಿಕ ಸಮಾಜದ ನಡುವೆ ಹೆಣವನ್ನು ಎಸೆಯುವ ಅಮಾನವೀಯ ವರ್ತನೆ ಹಲವರ ಟೀಕೆಗೆ ಕಾರಣವಾಗಿದೆ. ಇದು ನಮ್ಮ ನಾಗರಿಕತೆಯೇ ? ಸಂಸ್ಕೃತಿಯೇ ? ಎಂದು ನೆಟ್ಟಿಗರು ಬೇಸರ ವ್ಯಕ್ತಪಡಿಸಿದ್ದಾರೆ
ವಿಡಿಯೋಗಾಗಿ ಇಲ್ಲಿ ಕ್ಲಿಕ್ ಮಾಡಿ
Which civilized society treats its dead people in this way? Is this the 10,000 years of culture and civilization? Train Accident in Odisha, India. pic.twitter.com/gQtvqFvnPY
— Ashok Swain (@ashoswai) June 3, 2023