ಮಂಗಳೂರು: ಮೂರು ನಿಮಿಷದಲ್ಲಿ ಮೆದುಳಿನ ಶಸ್ತ್ರ ಚಿಕಿತ್ಸೆ ಮಾಡುವ ಮೂಲಕ ಬೆಂಗಳೂರಿನ ನಾರಾಯಣ ಹೃದಯಾಲಯದ ವೈದ್ಯರು ಹೊಸ ದಾಖಲೆ ಸೃಷ್ಟಿಸಿದ್ದಾರೆ.
ದಿಲ್ಲಿಯಲ್ಲಿ ಆಯೋಜಿಸಿದ್ದ ನೈಸ್ ಹೆಸರಿನ ಕಾನ್ಫರೆನ್ಸ್ನಲ್ಲಿ ಈ ದಾಖಲೆ ಬರೆಯಲಾಗಿದೆ. ನಾರಾಯಣ ಹೃದಯಾಲಯದ ಡಾ. ವಿಕ್ರಂ ಹುಡೇದ್ ಅವರ ತಂಡ 47 ವರ್ಷದ ವ್ಯಕ್ತಿ ಒಬ್ಬರ ಮೆದುಳಿನ ಕೂದಲಿನ ಗಾತ್ರದ ನರಮಂಡಲದಲ್ಲಿ ಆಪರೇಷನ್ ಮಾಡುವ ಸವಾಲನ್ನು ಎದುರಿಸಿದ್ದು ಒಂದು ಗಂಟೆ ಸಮಯ ತಗಲಬಹುದಾದ ಶಸ್ತ್ರಚಿಕಿತ್ಸೆಯನ್ನು ಕೇವಲ ಎರಡೂವರೆ ನಿಮಿಷದಲ್ಲಿ ಮಾಡಿ ಮುಗಿಸಿದೆ.
ಬ್ರೈನ್ ಅನುರಿಸಂ ಎಂದು ಕರೆಯಲ್ಪಡುವ ಕಾಯಿಲೆ ಕಂಡುಬಂದಿದ್ದ ವ್ಯಕ್ತಿಯ ಕಾಲಿನಿಂದ ಡಿವೈಸ್ ಒಂದರ ಮೂಲಕ ತಲೆಗೆ ಸಂಪರ್ಕ ಕಲ್ಪಿಸಿ ಬ್ರೈನ್ ಒಳಗೆ ಉಂಟಾಗಿದ್ದ ಗುಳ್ಳೆಯನ್ನು ಡಾ. ವಿಕ್ರಂ ಹುಡೇದ್ ಆಪರೇಷನ್ ಮಾಡಿ ಯಾವುದೇ ತೊಂದರೆ ಇಲ್ಲದೆ ಹೊರತೆಗೆದಿದ್ದಾರೆ.
ವೈದ್ಯರ ತಂಡದ ಈ ಸಾಧನೆಯನ್ನು ದೇಶದಲ್ಲೇ ಮೊದಲು ಎಂದು ವಿಶ್ಲೇಷಿಸಲಾಗುತ್ತಿದೆ. ಶಸ್ತ್ರಚಿಕಿತ್ಸೆ ನಡೆಸಿದ ಡಾ. ವಿಕ್ರಂ ಹುಡೇದ್ ತಂಡದಲ್ಲಿದ್ದ ಡಾ.ದಿಲೀಪ್, ಡಾ.ತನೈ ಹಾಗೂ ಡಾ.ಅನುಷಾ ಲೈವ್ ಕಾನ್ಫರೆನ್ಸ್ ನಲ್ಲಿ ಮೊದಲ ಸ್ಥಾನ ಪಡೆದಿದ್ದಾರೆ. ಸುಮಾರು 35ಕ್ಕೂ ಹೆಚ್ಚು ದೇಶಗಳ ವೈದ್ಯರ ತಂಡ ಈ ಸ್ಪರ್ಧೆಯಲ್ಲಿ ಭಾಗವಹಿಸಿತ್ತು.