27 ವರ್ಷಗಳ ಬಳಿಕ ಭಾರತದಲ್ಲಿ ನಡೆಯಲಿದೆ ವಿಶ್ವ ಸುಂದರಿ ಸ್ಪರ್ಧೆ

ಮಂಗಳೂರು: ವಿಶ್ವ ಸುಂದರಿ ಸ್ಪರ್ಧೆಯ 71ನೇ ಆವೃತ್ತಿ ಭಾರತದಲ್ಲಿ ನಡೆಯಲಿದೆ ಎಂದು ವಿಶ್ವ ಸುಂದರಿ ಕರೋಲಿನಾ ಹಾಗೂ ಮಿಸ್ ವರ್ಲ್ಡ್ ಆರ್ಗನೈಸೇಷನ್ ಅಧ್ಯಕ್ಷೆ ಮತ್ತು ಸಿಇಒ ಜೂಲಿಯ ತಿಳಿಸಿದ್ದಾರೆ. 30 ವರ್ಷಗಳ ಹಿಂದೆ ನಾನು ಭಾರತಕ್ಕೆ ಕಾಲಿಟ್ಟಿದ್ದೆ. ಅಂದಿನಿಂದಲೂ ನಾನು ಭಾರತದ ಬಗ್ಗೆ ಅಪಾರ ಪ್ರೀತಿ ಹೊಂದಿದ್ದೇನೆ ಎಂದು ಜೂಲಿಯ ಹೇಳಿದ್ದಾರೆ.


130ಕ್ಕೂ ಹೆಚ್ಚು ದೇಶದ ಸ್ಪರ್ಧಿಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಲಿದ್ದು, ನವೆಂಬರ್ ಅಥವಾ ಡಿಸೆಂಬರ್ ನಲ್ಲಿ ಸ್ಪರ್ಧೆ ನಡೆಯಲಿದೆ. 1996ರಲ್ಲಿ ಭಾರತದಲ್ಲಿ ಈ ಸ್ಪರ್ಧೆ ನಡೆದಿತ್ತು. ಇದುವರೆಗೆ ಆರು ಬಾರಿ ವಿಶ್ವಸುಂದರಿ ಸ್ಪರ್ಧೆಯಲ್ಲಿ ಭಾರತ ಗೆದ್ದಿದೆ. 1966 ರಲ್ಲಿ ರೀಟಾ ಫರಿಯ, 1994 ರಲ್ಲಿ ಐಶ್ವರ್ಯ ರೈ, 1997 ರಲ್ಲಿ ಡಯಾನ ಹೇಡನ್ , 1999 ರಲ್ಲಿ ಯುಕ್ತಾ ಮುಖಿ, 2000 ನೇ ಇಸವಿಯಲ್ಲಿ ಪ್ರಿಯಾಂಕ ಚೋಪ್ರಾ ಈ ಕಿರೀಟವನ್ನು ತಮ್ಮದಾಗಿಸಿಕೊಂಡಿದ್ದರು.

LEAVE A REPLY

Please enter your comment!
Please enter your name here