ಈಜಿಪ್ಟ್ ನಲ್ಲೊಂದು ಭಯಾನಕ ಘಟನೆ – ತಂದೆಯ ಕಣ್ಣ ಮುಂದೆಯೇ ಮಗನನ್ನು ತಿಂದು ಮುಗಿಸಿದ ಶಾರ್ಕ್

ಮಂಗಳೂರು(ಈಜಿಪ್ಟ್): ಸಮುದ್ರಕ್ಕೆ ಈಜಲು ತೆರಳಿದ ಯುವಕನೊಬ್ಬನನ್ನು ಎಲ್ಲರ ಕಣ್ಣೆದುರೇ ಶಾರ್ಕ್ ತಿಂದು ಮುಗಿಸಿದ ಘಟನೆ ಈಜಿಪ್ಟ್ ನ ಹುರ್ಘಡನ ಕೆಂಪು ಸಮುದ್ರದಲ್ಲಿ ನಡೆದಿದೆ.

ರಷ್ಯಾದಿಂದ ಪ್ರವಾಸಕ್ಕೆಂದು ಆಗಮಿಸಿದ್ದ 23 ವರ್ಷದ ವ್ಲಾದಿಮಿರ್ ಪೋಪೋವ್ ಸಮುದ್ರದಲ್ಲಿ ಈಜಲು ತೆರಳಿದ್ದಾಗ ಈ ದುರ್ಘಟನೆ ನಡೆದಿದೆ. ಕುಟುಂಬ ಸಮೇತವಾಗಿ ಪಪ್ಪು ಈಜಿಪ್ಟಿಗೆ ಪ್ರವಾಸಕ್ಕೆ ಬಂದಿದ್ದು, ಈಜುವುದಕ್ಕಾಗಿ ಈತ ಸಮುದ್ರಕ್ಕೆ ಇಳಿದ ಕೆಲವೇ ಕ್ಷಣದಲ್ಲಿ ಟೈಗರ್ ಶಾರ್ಕ್ ಪೋಪೋವ್ ಮೇಲೆ ದಾಳಿ ಮಾಡಿದೆ.

ಯುವಕ ಅಪ್ಪ ಎಂದು ಕೂಗುತ್ತಿದ್ದರೂ ದಡದಲ್ಲಿ ಅಸಹಾಯಕರಾಗಿ ನಿಂತಿದ್ದ ತಂದೆಗೆ ಕಣ್ಣೀರು ಹಾಕಲಷ್ಟೇ ಸಾಧ್ಯವಾಯಿತು. ತಂದೆ ನೋಡ ನೋಡುತ್ತಿದ್ದಂತೆ ಶಾರ್ಕ್ ಪೋಪೋವ್ ನನ್ನು ತಿಂದು ಮುಗಿಸಿದೆ. ಘಟನೆ ಕಂಡು ಉಳಿದ ಪ್ರವಾಸಿಗರು ಸ್ಥಳಕ್ಕೆ ಆಗಮಿಸಿದರು ಯಾರು ಸಹಾಯ ಮಾಡುವ ಸ್ಥಿತಿಯಲ್ಲಿ ಇರಲಿಲ್ಲ. ಅಧಿಕಾರಿಗಳು ಕೆಂಪು ಸಮುದ್ರದ 74 ಕಿಲೋಮೀಟರ್ ಸುತ್ತಮುತ್ತಲ ಪ್ರದೇಶವನ್ನು ಬಂದು ಮಾಡಿದ್ದಾರೆ. ಘಟನೆಯಿಂದ ಪ್ರವಾಸಿಗರು ಮತ್ತು ಅಧಿಕಾರಿಗಳು ಶಾರ್ಕ್ ನ ಅನಿರೀಕ್ಷಿತ ದಾಳಿಗೆ ದಂಗಾಗಿದ್ದಾರೆ. ಘಟನೆಯ ಬಳಿಕ ಶಾರ್ಕ್‌ ನ್ನು ಹಿಡಿದು ದಡಕ್ಕೆ ತರಲಾಗಿದೆ

 

LEAVE A REPLY

Please enter your comment!
Please enter your name here