ವಿಮಾನ ಪಥನಗೊಂಡು 40 ದಿನಗಳ ಬಳಿಕ ಅಮೆಝೋನ್ ಕಾಡಿನಲ್ಲಿ ಜೀವಂತವಾಗಿ ಸಿಕ್ಕ ನಾಲ್ಕು ಮಕ್ಕಳು

ಮಂಗಳೂರು(ಬೋಗೋಟಾ): ವಿಮಾನ ಪತನವಾಗಿ 40 ದಿನಗಳ ಬಳಿಕ ಅಮೆಜಾನ್ ದಟ್ಟ ಅರಣ್ಯದಿಂದ ಮಗು ಸೇರಿದಂತೆ ನಾಲ್ಕು ಮಕ್ಕಳನ್ನು ಜೀವಂತವಾಗಿ ರಕ್ಷಿಸಲಾದ ಘಟನೆ ಕೊಲಂಬಿಯಾದಲ್ಲಿ ನಡೆದಿದೆ.
ಮೇ .1ರಂದು ಏಳು ಪ್ರಯಾಣಿಕರು ಮತ್ತು ಓರ್ವ ಪೈಲೆಟ್ ಇದ್ದ ಸಣ್ಣ ವಿಮಾನವೊಂದು ಎಂಜಿನ್ ವೈಫಲ್ಯದಿಂದಾಗಿ ಅಮೆಜಾನ್ ಪ್ರದೇಶದಲ್ಲಿ ಪತನವಾಗಿತ್ತು.

ತೀವ್ರ ಹುಡುಕಾಟದ ಬಳಿಕ ಅಮೆಜಾನ್ ದಟ್ಟ ಕಾಡಿನಲ್ಲಿ ಪತನವಾಗಿದ್ದ ವಿಮಾನ ಪತ್ತೆಯಾಗಿತ್ತು . ಇದರೊಂದಿಗೆ ವಿಮಾನದಲ್ಲಿದ್ದ 3 ವಯಸ್ಕರ ಮೃತದೇಹಗಳು ಪತ್ತೆಯಾಗಿದ್ದವು. ಆದರೆ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ 11ತಿಂಗಳ ಮಗು ಸೇರಿದಂತೆ 13, 9 , 4, ವರ್ಷದ ಒಂದೇ ಕುಟುಂಬದ ಮಕ್ಕಳು ಮಾತ್ರ ಪತ್ತೆಯಾಗಿರಲಿಲ್ಲ.
ಕಾರ್ಯಾಚರಣೆ ವೇಳೆ ಕಾಡಿನಲ್ಲಿ ಮಕ್ಕಳ ಹೆಜ್ಜೆ ಗುರುತು, ಅರ್ಧ ತಿಂದ ಹಣ್ಣುಗಳು ಸೇರಿದಂತೆ ಹಲವು ಕುರುಹುಗಳು ಪತ್ತೆಯಾಗಿದ್ದು, ಮಕ್ಕಳು ಬದುಕಿರುವ ನಿರೀಕ್ಷೆ ಹೆಚ್ಚಾಗಿ ಹುಡುಕಾಟವನ್ನು ತೀವ್ರ ಗೊಳಿಸಲಾಯಿತು. ಮಕ್ಕಳ ಹುಡುಕಾಟಕ್ಕಾಗಿ ನಾಯಿಗಳನ್ನು ಮತ್ತು 150 ಸೈನಿಕರನ್ನು, ಬುಡಕಟ್ಟು ಜನಾಂಗದ ಸ್ವಯಂಸೇವಕರನ್ನು ಬಳಸಲಾಯಿತು. ಮಕ್ಕಳು ಮುಂದೆ ಸಾಗದಂತೆ ತಡೆಯಲು ಕಾಡಿನಾದ್ಯಂತ ಧ್ವನಿಸುರುಳಿಗಳನ್ನು ಪ್ರಸಾರ ಮಾಡಲಾಯಿತು. ಹಸಿವಿನಿಂದ ಪ್ರಾಣಕ್ಕೆ ತೊಂದರೆಯಾಗಬಾರದೆಂದು ಹೆಲಿಕಾಪ್ಟರ್ ಮೂಲಕ ಆಹಾರ ನೀರಿನ ಬಾಟಲಿಗಳನ್ನು ಕಾಡಿನೊಳಕ್ಕೆ ಎಸೆಯಲಾಯಿತು. 40 ದಿನಗಳ ಬಳಿಕ ಕೊನೆಗೂ ನಾಪತ್ತೆಯಾಗಿದ್ದ ಮಕ್ಕಳು ಜೀವಂತವಾಗಿ ಪತ್ತೆಯಾಗಿದ್ದಾರೆ. ಇದೊಂದು ವಿಸ್ಮಯಕಾರಿ ಘಟನೆ ಹುಡುಕಾಟದ 40 ದಿನಗಳ ಬಳಿಕ ಸೇನಾಪಡೆ ಹಾಗೂ ಸ್ಥಳೀಯ ಜನರು ಮಕ್ಕಳನ್ನು ಪತ್ತೆ ಮಾಡಿದ್ದಾರೆ. ಕಷ್ಟದ ಪರಿಸ್ಥಿತಿಯಲ್ಲಿ ಮಕ್ಕಳು ಧೈರ್ಯದಿಂದ ಬದುಕುಳಿಯುವ ಮಾರ್ಗಗಳನ್ನು ಕಂಡು ಹಿಡಿದಿರುವುದನ್ನು ಇತಿಹಾಸ ನೆನಪಿಟ್ಟುಕೊಳ್ಳುತ್ತದೆ ಎಂದು ಕೊಲಂಬಿಯ ಅಧ್ಯಕ್ಷ ಗುಸ್ತಾವೋ ಪೆಟ್ರೋ ಟ್ವೀಟ್ ಮಾಡಿದ್ದಾರೆ.

ಟ್ವೀಟ್‌ ಗಾಗಿ ಇಲ್ಲಿ ಕ್ಲಿಕ್‌ ಮಾಡಿ

LEAVE A REPLY

Please enter your comment!
Please enter your name here