ಪ್ರೇಯಸಿಯನ್ನು ಕೊಂದು ಮನೆಯ ಟ್ಯಾಂಕಿನಲ್ಲಿ 14 ದಿನ ಬಚ್ಚಿಟ್ಟ ಕಿರಾತಕ

ಮಂಗಳೂರು(ಲಕ್ನೋ): ವ್ಯಕ್ತಿಯೋರ್ವ ತನ್ನ ಪ್ರಿಯತಮೆಯನ್ನು ಕೊಂದು ಆಕೆಯ ಶವವನ್ನು ನಿರ್ಮಾಣ ಹಂತದಲ್ಲಿರುವ ತನ್ನ ಮನೆಯ ನೀರಿನ ಟ್ಯಾಂಕ್ ನಲ್ಲಿ ಬಚ್ಚಿಟ್ಟ ಘಟನೆ ಉತ್ತರ T-shirt ಪ್ರಯಾಗ್ ರಾಜ್ ನಲ್ಲಿ ನಡೆದಿದೆ.

ರಾಜ್ ಕೇಸರ್ (35) ಕೊಲೆಯಾದ ಮಹಿಳೆ. ಯಮುನಾ ಪುರ್ ಪೋಲಿಸ್ ಠಾಣಾ ವ್ಯಾಪ್ತಿಯ ಮಾದೇವ ಪ್ರದೇಶದಲ್ಲಿ ಘಟನೆ ನಡೆದಿದ್ದು ಆರೋಪಿ ಅರವಿಂದನನ್ನು ಪೊಲೀಸರು ಬಂಧಿಸಿದ್ದಾರೆ. 15 ದಿನಗಳ ಹಿಂದೆ ತನ್ನ ಪ್ರೇಯಸಿಯನ್ನು ಕೊಂದು ನಿರ್ಮಾಣ ಹಂತದಲ್ಲಿರುವ ತನ್ನ ಮನೆಯ ಟ್ಯಾಂಕ್ ನಲ್ಲಿ ಆಕೆಯ ಶವವನ್ನು ಬಚ್ಚಿಟ್ಟಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಮೇ.30ರಂದು ಕೇಸರ್ ಅವರ ಕುಟುಂಬವು ಆಕೆ ಕಾಣೆಯಾಗಿದ್ದಾಳೆ ಎಂದು ದೂರು ನೀಡಿತ್ತು. ಈ ಹಿನ್ನೆಲೆಯಲ್ಲಿ ಆಕೆಯ ಫೋನ್ ಕರೆಗಳ ವಿವರದ ಆಧಾರದ ಮೇಲೆ ಅರವಿಂದನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ ವೇಳೆ ಸತ್ಯಾಂಶ ಬಯಲಾಗಿದೆ.

LEAVE A REPLY

Please enter your comment!
Please enter your name here