ಮಂಗಳೂರು: ಹೊಸ ಮನೆಗಳ ಮಾಲೀಕರು ಮತ್ತು ಹೊಸದಾಗಿ ಬಾಡಿಗೆ ಮನೆಗಳಿಗೆ ಬಂದವರಿಗೆ ಸರಕಾರ ಉಚಿತ ವಿದ್ಯುತ್ ನೀಡಲು ಹೊಸ ಸೂತ್ರವೊಂದನ್ನು ಮುಂದಿಟ್ಟಿದೆ.
ಇಂತಹ ಗ್ರಾಹಕರಿಗೆ ವಿದ್ಯುತ್ ಬಳಕೆಯ ಸರಾಸರಿಯನ್ನು ತಿಂಗಳಿಗೆ 53 ಯುನಿಟ್ ಗೆ ನಿಗದಿ ಮಾಡಿದ್ದು ಅದಕ್ಕೆ ಶೇಕಡ ಹತ್ತರಷ್ಟು ಯುನಿಟ್ ಸೇರಿಸಲಾಗುವುದು. ಒಟ್ಟು 58 ರಿಂದ 59 ಯುನಿಟ್ ಗಳಷ್ಟು ಉಚಿತ ವಿದ್ಯುತ್ ನೀಡಲಾಗುವುದು ಎಂದು ಇಂಧನ ಸಚಿವ ಕೆ ಜೆ ಜಾರ್ಜ್ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಒಂದು ವೇಳೆ ಈ ಗ್ರಾಹಕರು 58 ಯುನಿಟ್ ಗಳಿಂದ 200 ಯುನಿಟ್ ವರೆಗೆ ಬಳಕೆ ಮಾಡಿದರೆ ವ್ಯತ್ಯಾಸದ ಮೊತ್ತವನ್ನು ಅವರೇ ಭರಿಸಬೇಕು. ಸಾಮಾನ್ಯ ಸ್ಲಾಬ್ ಅನ್ವಯ ಬಿಲ್ ಪಾವತಿಸಬೇಕಾಗುತ್ತದೆ. 200 ಯುನಿಟ್ ಗಳಿಗಿಂತ ಹೆಚ್ಚು ಬಳಸಿದರೆ ಪೂರ್ತಿ ಬಿಲ್ ಗ್ರಾಹಕರೇ ಪಾವತಿಸಬೇಕಾಗುತ್ತದೆ ಎಂದು ಸಚಿವರು ಹೇಳಿದ್ದಾರೆ.