ಮಂಗಳೂರು: ಮಹಿಳೆಯೊಬ್ಬರ ಖಾಸಗಿ ಫೋಟೋ ಮತ್ತು ವಿಡಿಯೋ ಬಳಸಿ ಮಾನಸಿಕ ಹಿಂಸೆ ನೀಡಿ, ಜೀವ ಬೆದರಿಕೆ ಒಡ್ಡಿ ಪ್ರತಿ ತಿಂಗಳು ಹಣ ಪಡೆದು ಬ್ಲಾಕ್ ಮೈಲ್ ಮಾಡುತ್ತಿದ್ದ ರಂಜಿತ್ ಶೆಟ್ಟಿ ಎಂಬಾತನ ವಿರುದ್ದ ಉರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆರೋಪಿ ರಂಜಿತ್ ಶೆಟ್ಟಿಗೆ ಪೇಸ್ಬುಕ್ ಮೂಲಕ ಮಹಿಳೆಯ ಪರಿಚಯವಾಗಿದ್ದು ನಂತರದ ದಿನಗಳಲ್ಲಿ ಇಬ್ಬರೂ ಅನ್ಯೋನ್ಯವಾಗಿದ್ದರು. ಈ ವೇಳೆ ಆರೋಪಿ ಮಹಿಳೆಯ ಖಾಸಗಿ ಪೋಟೋ ಮತ್ತು ವಿಡಿಯೋ ತೆಗೆದಿದ್ದ. ಈ ಕಾರಣಕ್ಕಾಗಿಯೇ ಮಹಿಳೆ ಆತನಿಂದ ದೂರವಾಗಿದ್ದರು. ಆ ಬಳಿಕ ಆರೋಪಿ ರಂಜಿತ್ ಫೋಟೋ ಮತ್ತು ವಿಡಿಯೋ ಬಳಸಿ ಪ್ರತೀ ತಿಂಗಳು ಮಹಿಳೆಯಿಂದ 20 ಸಾವಿರ ರೂಪಾಯಿಯಂತೆ ಪಡೆದಿದ್ದಲ್ಲದೆ ಜಾಲತಾಣ ಮತ್ತು ಮಹಿಳೆಯ ಕಚೇರಿಯ ಇಮೈಲ್ ಮತ್ತು ಸಹೋದ್ಯೋಗಿಗಳ ಮೊಬೈಲ್‌ಗಳಿಗೆ ಫೋಟೋ ಮತ್ತು ವಿಡಿಯೋ ಕಳುಹಿಸಿ ಮಾನಹಾನಿಗೆ ಯತ್ನಿಸಿದ್ದಲ್ಲದೆ ಆಕೆಯ ತಾಯಿ ಮನೆಗೂ ಹೋಗಿ ಬೆದರಿಕೆ ಹಾಕಿದ್ದಾನೆ. ಈತನ ಕಾಟದಿಂದ ರೋಸಿ ಹೋದ ಮಹಿಳೆ ಮಾನಸಿಕವಾಗಿ ನೊಂದು ಉರ್ವ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.