ಬೊಜ್ಜು ಕರಗಿಸಲು ಹೋದ ಯುವತಿಯ ಅರೆಬೆತ್ತಲೆ ದೇಹದ ವಿಡಿಯೋ ಚಿತ್ರಿಕರಣ – ದೂರು ದಾಖಲು

ಮಂಗಳೂರು: ಬೊಜ್ಜು ಕರಗಿಸಲು ರಾಜಾಜಿನಗರದ ಶೆಟ್ಟಿಸ್ ಕ್ಲಿನಿಕ್ ಗೆ ಹೋದ ಯುವತಿಯ ಅರೆಬೆತ್ತಲೆ ವಿಡಿಯೋ ರೆಕಾರ್ಡ್ ಮಾಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಕಳೆದ ತಿಂಗಳು ಯುವತಿಯೊಬ್ಬಳು ಬೊಜ್ಜು ಕರಗಿಸುವ ಚಿಕಿತ್ಸೆಗೆಂದು ಶೆಟ್ಟಿಸ್ ಕ್ಲಿನಿಕ್ ಗೆ ತೆರಳಿದ್ದಾಳೆ. ಈ ವೇಳೆ ಪರೀಕ್ಷಾ ಕೊಠಡಿಯಲ್ಲಿ ಡಾ. ಶೆಟ್ಟಿ ಮತ್ತು ಇಬ್ಬರು ಮಹಿಳಾ ಸಿಬ್ಬಂದಿಗಳಿದ್ದು, ಒಬ್ಬಾಕೆ ಚೆಕ್ಅಪ್ ಗಾಗಿ ಮೈ ಮೇಲಿದ್ದ ಬಟ್ಟೆ ತೆಗೆಯಲು ತಿಳಿಸಿದ್ದಾರೆ. ಅದೇ ರೀತಿ ಯುವತಿ ಬಟ್ಟೆ ತೆಗೆದಿದ್ದು ಒಳ ಉಡುಪಿನಲ್ಲಿ ಪರೀಕ್ಷೆ ಮಾಡಿಸಿಕೊಂಡಿದ್ದಾರೆ. ಆದರೆ ಪರೀಕ್ಷಾ ಕೊಠಡಿಯಲ್ಲಿ ಸಿಸಿ ಕ್ಯಾಮೆರಾ ಅಳವಡಿಸಲಾಗಿದ್ದು ಯುವತಿಯ ಸಂಪೂರ್ಣ ಚಿತ್ರಣ ಸಿ ಸಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಇದನ್ನು ಗಮನಿಸಿದ ಯುವತಿ ತಕ್ಷಣ ತನ್ನ ಅಣ್ಣನಿಗೆ ಮಾಹಿತಿ ನೀಡಿದ್ದಾಳೆ. ತಕ್ಷಣ ಕ್ಲಿನಿಕ್ಕಿಗೆ ಕರೆ ಮಾಡಿದ ಆಕೆಯ ಅಣ್ಣ ಸಿಸಿಟಿವಿ ವಿಡಿಯೋವನ್ನು ಡಿಲೀಟ್ ಮಾಡುವಂತೆ ಕೇಳಿಕೊಂಡಿದ್ದಾರೆ. ಆದರೆ ಶೆಟ್ಟಿಸ್ ಕ್ಲಿನಿಕ್ ಸರಕಾರದ ಆದೇಶವಿದೆಯೆಂದು ಹೇಳಿ ವಿಡಿಯೋ ಡಿಲೀಟ್ ಮಾಡಲು ನಿರಾಕರಿಸಿದೆ. ಸುಬ್ರಹ್ಮಣ್ಯ ನಗರ ಪೊಲೀಸ್ ಠಾಣೆಯಲ್ಲಿ ಯುವತಿ ಕ್ಲಿನಿಕ್ ವಿರುದ್ಧ ದೂರು ಸಲ್ಲಿಸಿದ್ದಾರೆ.

LEAVE A REPLY

Please enter your comment!
Please enter your name here