ಚಂದ್ರಯಾನ-3 ಉಡಾವಣೆಗೆ ದಿನಾಂಕ ಫಿಕ್ಸ್

ಮಂಗಳೂರು: ಚಂದ್ರಯಾನ-3 ರ ಎಲ್ಲಾ ಪೂರ್ವ ಪರೀಕ್ಷೆಗಳು ಯೋಜಿಸಿದಂತೆ ಉತ್ತಮವಾಗಿ ನಡೆದರೆ ಜುಲೈ 12ರಿಂದ 19ರ ನಡುವೆ ಬಾಹ್ಯಾಕಾಶಕ್ಕೆ ಉಡಾವಣೆಯಾಗಲಿದೆ ಎಂದು ಇಸ್ರೋ ಅಧ್ಯಕ್ಷ ಎಸ್‌ ಸೋಮನಾಥ್‌ ಹೇಳಿದ್ದಾರೆ. ಚಂದ್ರನ ಮೇಲ್ಮೈಯಲ್ಲಿ ಇಳಿಯುವ ಭಾರತದ ಮಹತ್ವಾಕಾಂಕ್ಷೆಯ ಯೋಜನೆಯಾದ ಚಂದ್ರಯಾನ-3 ಉಡಾವಣೆಗೆ ಶ್ರೀಹರಿ ಕೋಟಾದ ಕೇಂದ್ರದಲ್ಲಿ ಅಂತಿಮ ಸಿಧ್ದತೆಗಳು ನಡೆಯುತ್ತಿದೆ ಎಂದು ಹೇಳಿದ್ದಾರೆ.‌

ಈ ಉಡಾವಣೆಗೆ ಎಲ್‌ವಿಎಮ್-3‌ ರಾಕೆಟ್‌ ಬಳಸಲಾಗುತ್ತಿದ್ದು ಜೋಡಣಾ ಕಾರ್ಯ ನಡೆಯುತ್ತಿದೆ. ಇದರ ಎಲ್ಲಾ ಭಾಗಗಳು ಶ್ರೀಹರಿ ಕೋಟಾ ತಲುಪಿದ್ದು, ಚಂದ್ರನ ಮೇಲೆ ಸೇಫ್‌ ಲ್ಯಾಂಡಿಂಗ್‌ ಮತ್ತು ರೋವರ್ಸ್‌ ಸಂಚಾರ ಈ ಮಿಷನ್ ನ ಪ್ರಮುಖ ಉದ್ದೇಶ ಎಂದವರು ಹೇಳಿದ್ದಾರೆ.

LEAVE A REPLY

Please enter your comment!
Please enter your name here