ಮಂಗಳೂರು: ಪೇಜಾವರ ಮಠಾಧೀಶ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಹಲಸಿನ ಮರವೇರಿರುವ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಜೂ.14 ರಂದು ಗೋಶಾಲೆಗೆ ಭೇಟಿ ನೀಡಿದ ಪೇಜಾವರ ಶ್ರೀ ಗೋಶಾಲೆ ಆವರಣದಲ್ಲಿದ್ದ ಹಲಸಿನ ಮರ ಏರಿದ್ದಾರೆ.
ಮರದಲ್ಲಿ ಹಲಸಿನ ಹಣ್ಣುಗಳನ್ನು ಕಂಡ ಶ್ರೀಗಳು ಶಲ್ಯವನ್ನು ತಲೆಗೆ ಸುತ್ತಿ, ಕೈಯಲ್ಲಿ ಕತ್ತಿ ಹಿಡಿದು 30 ಅಡಿ ಎತ್ತರದ ಮರವನ್ನು ಏರಿದ್ದಾರೆ. ಸುಮಾರು 10 ಹಲಸಿನ ಹಣ್ಣುಗಳನ್ನು ಕಡಿದುರುಳಿಸಿ ಹಸುಗಳಿಗೆ ನೀಡುವ ಮೂಲಕ ಕೃಷಿ ಮತ್ತು ಹೈನುಗಾರಿಕೆಯಲ್ಲಿ ತಮಗಿರುವ ಆಸಕ್ತಿಯನ್ನು ಹೊರಹಾಕಿದ್ದಾರೆ. ಶ್ರೀಪಾದರು ಈ ಹಿಂದೆ ತೆಂಗಿನ ಮರದ ಗರಿಯ ಕಡ್ಡಿಯಲ್ಲಿ ಹಾವು ಹಿಡಿಯುವ ವಿಧಾನವನ್ನು ಪ್ರಾತ್ಯಕ್ಷಿಕೆ ಮೂಲಕ ತೋರಿಸಿದ್ದ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿತ್ತು.