ಮಂಗಳೂರು: ಜುಲೈ 1ರಿಂದ ಆರಂಭವಾಗಲಿರುವ ಅಮರನಾಥರ ಯಾತ್ರೆಯಲ್ಲಿ 40ಕ್ಕೆ ಹೆಚ್ಚು ಆಹಾರ ಪದಾರ್ಥಗಳನ್ನು ನಿಷೇಧಿಸಲಾಗಿದೆ. 14 ಕಿ.ಮೀ ಪಾದಯಾತ್ರೆಯ ಅಮರನಾಥ ಯಾತ್ರೆಯನ್ನು ಪ್ರಾರಂಭಿಸುವ ಮೊದಲು ನಿಷೇಧಿತ ಆಹಾರ ಪದಾರ್ಥಗಳ ಪಟ್ಟಿ ಮತ್ತು ತೀರ್ಥಯಾತ್ರೆಗೆ ಅನುಮತಿಸಲಾದ ವಸ್ತುಗಳನ್ನು ಪರಿಶೀಲಿಸಿಕೊಳ್ಳುವಂತೆ ಅಧಿಕಾರಿಗಳು ತಿಳಿಸಿದ್ದಾರೆ.
ನಿಷೇಧಿತ ಆಹಾರ ಪದಾರ್ಥಗಳಲ್ಲಿ ದೋಸೆ, ಪೂರಿ, ಪರಾಠ, ಫ್ರೈಡ್ ರೈಸ್, ಪಲಾವು ಸೇರಿದಂತೆ 40ಕ್ಕೂ ಹೆಚ್ಚು ಆಹಾರಗಳಲ್ಲದೆ ಪಾನೀಯಗಳು, ಕರಿದ ಮತ್ತು ತ್ವರಿತ ಆಹಾರ ಪದಾರ್ಥಗಳನ್ನು ನಿಷೇಧಿಸಲಾಗಿದೆ. ದಕ್ಷಿಣ ಕಾಶ್ಮೀರದಲ್ಲಿರುವ ಹಿಮಾಲಯನ್ ದೇಗುಲಕ್ಕೆ ತೀರ್ಥಯಾತ್ರೆ ಕೈಗೊಳ್ಳುವ ಭಕ್ತರು ದೈಹಿಕ ಕ್ಷಮತೆಯನ್ನು ಸಾಧಿಸಲು ದಿನಕ್ಕೆ ಸುಮಾರು ನಾಲ್ಕರಿಂದ ಐದು ಕಿ.ಮೀ. ಪೂರ್ವಭಾವಿಯಾಗಿ ಬೆಳಿಗ್ಗೆ ಮತ್ತು ಸಂಜೆ ನಡಿಗೆ ಆರಂಭಿಸುವಂತೆ ಶ್ರೀ ಅಮರ್ನಾಥ ಪುಣ್ಯಕ್ಷೇತ್ರ ಮಂಡಳಿ ಹೇಳಿದೆ.