ಜೂನ್ 22 ರಿಂದ ಬಿಜೆಪಿಯ ಏಳು ತಂಡಗಳಿಂದ ರಾಜ್ಯ ಪ್ರವಾಸ

ಮಂಗಳೂರು (ಬೆಂಗಳೂರು): ಕೇಂದ್ರ ಸರಕಾರಕ್ಕೆ 9 ವರ್ಷ ತುಂಬಿದ ಹಿನ್ನೆಲೆಯಲ್ಲಿ ಬಿಜೆಪಿಯ ಏಳು ತಂಡಗಳು ರಾಜ್ಯಾದ್ಯಂತ ಪ್ರವಾಸ ಕೈಗೊಳ್ಳಲಿದೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್ ರವಿಕುಮಾರ್ ತಿಳಿಸಿದ್ದಾರೆ.

ಈ ತಂಡಗಳು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಪ್ರವಾಸ ಮಾಡಲಿದ್ದು, 22 ರಿಂದ 26 ರೊಳಗೆ ರಾಜ್ಯದ ಪ್ರವಾಸ ಮುಕ್ತಾಯವಾಗಲಿದೆ. ಬಿಜೆಪಿ ಸರಕಾರದ ಸಾಧನೆಗಳನ್ನು ಈ ವೇಳೆ ಜನರಿಗೆ ತಿಳಿಸಲಾಗುವುದು ಎಂದು ಅವರು ಹೇಳಿದ್ದಾರೆ. ಕೇಂದ್ರ ಸರಕಾರಕ್ಕೆ 9 ವರ್ಷ ತುಂಬಿದ ಹಿನ್ನೆಲೆಯಲ್ಲಿ 26 ರಿಂದ ಜುಲೈ 5ರವರೆಗೆ ರಾಜ್ಯಾದ್ಯಂತ ಮನೆ ಮನೆಗೆ ತೆರಳಿ ಮನೆ ಮನೆಗೆ ಮೋದಿ ಕರಪತ್ರ ವಿತರಿಸಲಾಗುವುದು. ಮೋದಿಯವರ ಸರಕಾರದ ಸಾಧನೆಗಳನ್ನು ಐವತ್ತು ಲಕ್ಷ ಮನೆಗಳಿಗೆ ತಲುಪಿಸುತ್ತೇವೆ ಎಂದು ಅವರು ಹೇಳಿದ್ದಾರೆ.

LEAVE A REPLY

Please enter your comment!
Please enter your name here