ಮಂಗಳೂರು(ಶಿವಮೊಗ್ಗ): ತುಂಗಾ ನದಿಯಲ್ಲಿ ಈಜಲು ತೆರಳಿದ ಉಪನ್ಯಾಸಕರಿಬ್ಬರು ನೀರುಪಾಲಾಗಿರುವ ಘಟನೆ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯ ತೀರ್ಥಮತ್ತೂರು ಗ್ರಾಮದ ಬಳಿ ನಡೆದಿದೆ. ಕಾರ್ಕಳದ ಪ್ರತಿಷ್ಠಿತ ಕಾಲೇಜಿನ ಉಪನ್ಯಾಸಕರಿಬ್ಬರು ಸ್ನೇಹಿತರೊಂದಿಗೆ ಪ್ರವಾಸಕ್ಕೆ ಹೋಗಿದ್ದು ತುಂಗಾ ನದಿಯಲ್ಲಿ ಈಜಲು ತೆರಳಿದ್ದ ವೇಳೆ ಈ ದುರಂತ ಸಂಭವಿಸಿದೆ.
ನಿಟ್ಟೆ ಕಾಲೇಜಿನ ಉಪನ್ಯಾಸಕರಾದ ಪುನೀತ್ (38) ಮತ್ತು ಬಾಲಾಜಿ (36) ತುಂಗಾ ನದಿಯಲ್ಲಿ ಈಜಲು ತೆರಳಿದ್ದು ಬಳಿಕ ನೀರಿನಲ್ಲಿ ನಾಪತ್ತೆಯಾಗಿದ್ದಾರೆ. ತಕ್ಷಣ ನಡೆಸಿದ್ದ ಕಾರ್ಯಾಚರಣೆಯಿಂದ ಓರ್ವರ ಮೃತದೇಹ ಪತ್ತೆಯಾಗಿದ್ದು ಮತ್ತೋರ್ವರ ಮೃತದೇಹಕ್ಕಾಗಿ ಅಗ್ನಿಶಾಮಕ ದಳದಿಂದ ಶೋಧಕಾರ್ಯ ಮುಂದುವರೆದಿದೆ.