ಮಂಗಳೂರು: ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ಕರ್ನಾಟಕ ವತಿಯಿಂದ 9ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆಯು ದ.ಕ ಜಿಲ್ಲಾಡಳಿತ, ಆಯುಷ್ ಇಲಾಖೆ ಹಾಗೂ ದೇವಸ್ಥಾನದ ಸಹಯೋಗದೊಂದಿಗೆ ಆಯುಷ್ ಪಠ್ಯಕ್ರಮದಂತೆ ಯೋಗಭ್ಯಾಸ, ಯೋಗ ದುರ್ಗಾ ನಮಸ್ಕಾರ, ಪ್ರಾಣಾಯಾಮ, ಧ್ಯಾನ ಸೇರಿ “ಯೋಗ ಸರ್ವ ವ್ಯಾಪಿ, ಸರ್ವ ಸ್ಪರ್ಶ” ಕಾರ್ಯಕ್ರಮವು ಇತಿಹಾಸ ಪ್ರಸಿದ್ಧ ಮಹತೋಭಾರ ಶ್ರೀ ಮಂಗಳಾದೇವಿ ದೇವಸ್ಥಾನದ ರಥ ಬೀದಿಯಲ್ಲಿ ಯಶಸ್ವಿಯಾಗಿ ಜರಗಿತು. ಬೆಳಿಗ್ಗೆ 4:50 ಕ್ಕೆ ಸರಿಯಾಗಿ ಭಜನೆ, ಅಮೃತವಚನ, ಪಂಚಾಂಗ ಪಠಣದೊಂದಿಗೆ ಪ್ರಾರಂಭಿಸಲಾಯಿತು.
ಮಹಾತೋಭಾರ ಶ್ರೀ ಮಂಗಳಾದೇವಿ ದೇವಸ್ಥಾನದ ಪ್ರಧಾನ ಅರ್ಚಕ ರಾಮಚಂದ್ರ ಐತಾಳ್, ದೇವಸ್ಥಾನದ ಟ್ರಸ್ಟಿ ಪ್ರೇಮಲತ ,ಮಂಗಳೂರು ಮಹಾನಗರ ಪಾಲಿಕೆಯ ಸದಸ್ಯರು, ನಿಕಟಪೂರ್ವ ಮಹಾಪೌರ ಪ್ರೇಮಾನಂದ ಶೆಟ್ಟಿ, ಆಯುಷ್ ಅಧಿಕಾರಿ ಪ್ರಕಾಶ್ ಎ.ಜೆ, ಎಸ್.ಪಿ.ವೈ.ಎಸ್.ಎಸ್ ಜಿಲ್ಲಾ ಸಂಚಾಲಕರಾದ ಜಯರಾಮ ಚೆಂಬುಗುಡ್ಡೆ, ಪ್ರಾಂತ ಸಂಚಾಲಕ ರವೀಶ್ ಕುಮಾರ್, ನೇತ್ರಾವತಿ ವಲಯ ಸಂಚಾಲಕ ಗೋಕುಲ್ ನಾಥ್ ಶೆಣೈ ದೀಪ ಪ್ರಜ್ವಲನೆ ಮಾಡುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು.
ಪ್ರಾಂತ ಸಂಚಾಲಕರಾದ ಹರೀಶ್ ಕೋಟ್ಯಾನ್ ಮೂಲ್ಕಿ ಹಾಗೂ ಶಿವಾನಂದ ರೈ ಮಾರ್ಗದರ್ಶನದೊಂದಿಗೆ ಮಾನಸಿಕ ಸಿದ್ದತೆ, ಶ್ವಾಸ ಕ್ರಿಯೆ, ಯೋಗ ದುರ್ಗಾ ನಮಸ್ಕಾರ, ಆಯುಷ್ ಇಲಾಖೆಯ ಪಠ್ಯ ಕ್ರಮವನ್ನು ಶಿಕ್ಷಕರಾದ ಶ್ರೀ ಕಲಾ ಕೊಂಚಾಡಿ, ಗೀತಾ ಕಂಕನಾಡಿ ನಡೆಸಿಕೊಟ್ಟರು. 1500 ಕ್ಕೂ ಮಿಕ್ಕಿ ಜನರು ಈ ಕಾರ್ಯಕ್ರಮದಲ್ಲಿ ಉತ್ಸಾಹದಿಂದ ಭಾಗವಿಹಿಸಿ ಯೋಗಭ್ಯಾಸ ಮಾಡಿದರು. ಕಾರ್ಯಕ್ರಮದ ಉದ್ದೇಶವನ್ನು ಶಿಕ್ಷಕರಾದ ಮೋಹಿನಿ ಕಂಕನಾಡಿ ತಿಳಿಸಿದರು.ಮಂಗಳೂರಿನ ವಿವಿಧ ಭಾಗಗಳಲ್ಲಿ ಪ್ರತಿನಿತ್ಯ ಯೋಗಭ್ಯಾಸ ಮಾಡುತ್ತಿರುವ ಯೋಗಪಟುಗಳು ಕಾರ್ಯಕ್ರಮ ಆರಂಭಕ್ಕೆ ಮುನ್ನವೇ ಆಗಮಿಸಿ ಸಂಪೂರ್ಣ ರಥಬೀದಿಯನ್ನು ಗುಡಿಸಿ ಸ್ವಚ್ಛಗೊಳಿಸುವ ಮೂಲಕ ಹೊಸ ಭಾಷ್ಯ ಬರೆದರು.
ಮಹಾನಗರಪಾಲಿಕೆ ಸದಸ್ಯೆ ವೀಣಾ ಮಂಗಳ, ಯೋಗ ಸಮಿತಿಯ ಜಿಲ್ಲಾ ಸಹ ಸಂಚಾಲಕರಾದ ಕನಕ ಅಮೀನ್, ನಾರಾಯಣ ಶಿಬಿರಾಯ, ಶಿಕ್ಷಣ ಪ್ರಮುಖ ಹರೀಶ್ ಅಂಚನ್, ಪ್ರಮುಖರಾದ ಪ್ರತಾಪ್ ಕೆ.ಎಸ್, ಲಕ್ಷ್ಮೀ ನಾರಾಯಣ, ಜಗನ್ನಾಥ ಹಳೆಯಂಗಡಿ, ಪ್ರಶಾಂತ್, ಶಿವಪ್ರಸಾದ್ ಪೊಳಲಿ, ಲೋಕೇಶ್ ಪೊಳಲಿ, ಲೀಲಾವತಿ ಸುರತ್ಕಲ್, ಅಂಬುಜಾಕ್ಷಿ, ಸುಮನಾ ಹೊಸಬೆಟ್ಟು, ಕವಿತಾ, ಗೀತಾ ಶೆಟ್ಟಿ, ಉಮೇಶ್ ಕದ್ರಿ, ಶ್ರೀನಿವಾಸ ಕೊಟ್ಟಾರ, ಪ್ರಕಾಶ್, ಹರೀಶ್ ಕಾವೂರು, ಗುಣ ಕಾವೂರು, ಪ್ರವೀಣ್ ಕೋಡಿಕಲ್, ಶೇಖರ್ ದೇವಾಡಿಗ, ಉಷಾ, ರಮೇಶ್ ತಡಂಬೈಲ್, ಶೋಭಾ ಬೈಕಂಪಾಡಿ, ಅನುಪಮ ಕಟೀಲ್, ದೇವದಾಸ್ ಮೀನಕಳಿಯ, ಗುರುರಾಜ್, ರಾಜೇಶ್ ರಾಘವೇಂದ್ರ ಮತ್ತಿತರರು ಉಪಸ್ಥಿತಿರಿದ್ದರು. ಸುಲೋಚನ ನಿರೂಪಣೆ ಮಾಡಿದರು. ಕಾರ್ಯಕ್ರಮದ ಸಂಚಾಲಕ ಈಶ್ವರ್ ಕೊಟ್ಟಾರಿ ವಂದನಾರ್ಪಣೆ ಮಾಡಿದರು.