ಹೈ ಸ್ಪೀಡ್‌ ರೈಲಿನಿಂದ ಪ್ಲಾಟ್‌ ಫಾರ್ಮ್ ಗೆ ಬಿದ್ದ ವ್ಯಕ್ತಿ -‌ ಪವಾಡ ಸದೃಶವಾಗಿ ಪಾರು – ವಿಡಿಯೋ ವೈರಲ್

ಮಂಗಳೂರು: ಹೈ ಸ್ಪೀಡ್ ರೈಲಿನಿಂದ ಪ್ಲಾಟ್‌ ಫಾರ್ಮ್ ಮೇಲೆ ಬಿದ್ದ ವ್ಯಕ್ತಿಯೊಬ್ಬ ಪವಾಡಸದೃಶ ರೀತಿಯಲ್ಲಿ ಪಾರಾದ ಘಟನೆ ಉತ್ತರ ಪ್ರದೇಶದ ಶಹಜಾನಪುರದಲ್ಲಿ ನಡೆದಿದೆ. ಘಟನೆಯ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲಾಗಿದೆ.

ಗಂಟೆಗೆ 110 ಕಿ.ಮೀ ವೇಗದಲ್ಲಿ ಬರುತ್ತಿದ್ದ ಪಾಟಲೀಪುತ್ರ ಎಕ್ಸ್ ಪ್ರೆಸ್ ರೈಲಿನಿಂದ ಸಾಜನ್ ಪುರ ರೈಲು ನಿಲ್ದಾಣದ ಪ್ಲಾಟ್‌ ಫಾರ್ಮ್ ಮೇಲೆ ಬಿದ್ದ ಬಳಿಕ ಹಲವಾರು ಅಡಿಗಳವರಿಗೆ ಜಾರಿಕೊಂಡು ಹೋಗಿದ್ದು, ಇತರ ಪ್ರಯಾಣಿಕರು ಈ ಅನಿರೀಕ್ಷಿತ ನಾಟಕೀಯ ಘಟನೆಯನ್ನು ನಿಬ್ಬೆರಗಾಗಿ ನೋಡುತ್ತಿದ್ದರು.

ರೈಲಿಂದ ಕೆಳಗೆ ಬಿದ್ದ ವ್ಯಕ್ತಿ ಎದ್ದುಕೊಂಡು ನಡೆದುಕೊಂಡು ಹೋಗಿದ್ದು ಆತನಿಗೆ ಗಾಯ ಕೂಡ ಆಗಿಲ್ಲ ಎಂದು ತಿಳಿದು ಬಂದಿದೆ. ಚಲಿಸುತ್ತಿದ್ದ ರೈಲಿನಿಂದ ಪ್ಲಾಟ್‌ ಫಾರ್ಮ್ ಗೆ ವ್ಯಕ್ತಿ ಹೇಗೆ ಬಿದ್ದಿದ್ದಾನೆ ಎಂಬುದು ಸ್ಪಷ್ಟವಾಗಿಲ್ಲ.

ವಿಡಿಯೋಗಾಗಿ ಇಲ್ಲಿ ಕ್ಲಿಕ್ ಮಾಡಿ

LEAVE A REPLY

Please enter your comment!
Please enter your name here