ಬೆಂಗಳೂರು ಮತ್ತು ಅಹಮದಾಬಾದ್‌ ನಲ್ಲಿ ರಾಯಭಾರ ಕಚೇರಿ ತೆರೆಯಲು ಅಮೇರಿಕಾ ಚಿಂತನೆ

ಮಂಗಳೂರು: ಪ್ರಧಾನಿ ನರೇಂದ್ರ ಮೋದಿಯವರ ಅಮೆರಿಕಾ ಭೇಟಿಯಿಂದ ಕನ್ನಡಿಗರಿಗೂ ಗುಡ್ ನ್ಯೂಸ್ ಸಿಗುವ ಸುಳಿವು ಸಿಕ್ಕಿದೆ. ಬೆಂಗಳೂರು ಹಾಗೂ ಅಹಮದಾಬಾದಿನಲ್ಲಿ ತನ್ನ ರಾಯಭಾರ ಕಚೇರಿ ತೆರೆಯಲು ಅಮೆರಿಕಾ ಚಿಂತನೆ ನಡೆಸಿದೆ.

ಅಮೆರಿಕಾವು ಬೆಂಗಳೂರು ಹಾಗೂ ಅಹಮದಾಬಾದಿನಲ್ಲಿ ಎರಡು ಹೊಸ ರಾಯಭಾರ ಕಚೇರಿಗಳನ್ನು ತೆರೆಯಲು ಉದ್ದೇಶಿಸಿದ್ದು, ಈ ಮೂಲಕ ಭಾರತದ ಜನರೊಂದಿಗೆ ಸಂಬಂಧವನ್ನು ಹೆಚ್ಚಿಸಲು ಮುಂದಾಗಿರುವುದಾಗಿ ಶ್ವೇತ ಭವನದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಕಳೆದ ವರ್ಷ ಅಮೆರಿಕಾ ಭಾರತೀಯ ವಿದ್ಯಾರ್ಥಿಗಳಿಗೆ ಸುಮಾರು 1,25,000 ದಾಖಲೆಯ ವೀಸಾಗಳನ್ನು ನೀಡಿದೆ. ದೇಶದಲ್ಲಿ ಭಾರತೀಯ ವಿದ್ಯಾರ್ಥಿಗಳ ಸಂಖ್ಯೆ 20 ಶೇಕಡದಷ್ಟು ಹಚ್ಚಳವಾಗಿದ್ದು ಅಮೆರಿಕಾದಲ್ಲೇ ಅತಿ ದೊಡ್ಡ ವಿದೇಶಿ ವಿದ್ಯಾರ್ಥಿ ಸಮುದಾಯವಾಗಲಿದೆ ಎಂದು ಅವರು ಹೇಳಿದ್ದಾರೆ. ಅಮೆರಿಕಾದ ವಾಷಿಂಗ್ಟನ್, ನ್ಯೂಯಾರ್ಕ್, ಸ್ಯಾನ್‌ಫ್ರಾನ್ಸಿಸ್ಕೋ, ಚಿಕಾಗೋ, ಹೂಸ್ಟನ್‌ ಹಾಗೂ ಅಟ್ಲಾಂಟಾದಲ್ಲಿ ಭಾರತ ತನ್ನ ಒಟ್ಟು ಐದು ರಾಯಭಾರ ಕಚೇರಿಗಳನ್ನು ಹೊಂದಿದೆ. ಭಾರತದಲ್ಲಿ ಪ್ರಸ್ತುತ ನವದೆಹಲಿ, ಮುಂಬೈ, ಕೊಲ್ಕತ್ತಾ, ಚೆನ್ನೈ ಹಾಗೂ ಹೈದರಾಬಾದ್ ನಲ್ಲಿ ಅಮೆರಿಕಾದ ರಾಯಭಾರ ಕಚೇರಿಗಳಿವೆ.

LEAVE A REPLY

Please enter your comment!
Please enter your name here