ಮಕ್ಕಳಿಗಾಗಿ ವಿಶೇಷ ಮಾಹಿತಿ
ಚಿರತೆ ಬೆಕ್ಕು
(Viverra Civettina)
ಇದು ಚಿರತೆ ಬೆಕ್ಕು ಎಂದೇ ಖ್ಯಾತಿಯನ್ನು ಹೊಂದಿದೆ. ದಕ್ಷಿಣ ಭಾರತದ ಕರಾವಳಿ ತಗ್ಗು ಪ್ರದೇಶವಾದ ಕರ್ನಾಟಕ ಹಾಗೂ ಕೇರಳದಲ್ಲಿ ಕಾಣಿಸಿಕೊಳ್ಳುತ್ತದೆ. ಕರ್ನಾಟಕದ ಪಶ್ಚಿಮ ಘಟ್ಟದ ಬೆಟ್ಟಗುಡ್ಡಗಳ ಇಳಿಜಾರು ಪ್ರದೇಶದಲ್ಲಿ ಬೀಡು ಬಿಟ್ಟಿರುತ್ತದೆ.
ಕಾಡುಗಳ ನಾಶದಿಂದ ಈ ಚಿರತೆ ಬೆಕ್ಕುಗಳು ಈಗ ಅವಸಾನದ ಹಾದಿ ಹಿಡಿದಿದೆ. ಈ ಪಾಮ್ ಸಿವೆಟ್ ನಿಶಾಚಾರ್ಯ ಆಗಿದ್ದು ರಾತ್ರಿ ವೇಳೆಯೇ ಬೇಟೆಯಾಡುತ್ತಾ ಆಹಾರಕ್ಕಾಗಿ ಸಣ್ಣ ಪುಟ್ಟ ಸಸ್ತನಿಗಳು, ಉಭಯವಾಸಿಗಳು ಮೀನು ಹಕ್ಕಿಯ ಮೊಟ್ಟೆಗಳು ಹಾಗೂ ಕೆಲವು ತರಕಾರಿಗಳ ಸೊಪ್ಪುಗಳನ್ನು ತಿನ್ನುತ್ತದೆ. ಈ ಪ್ರಾಣಿಯು ಒಂಟಿಯಾಗಿ ಹೆಚ್ಚಾಗಿದ್ದು ಸಮೂಹದಲ್ಲಿ ಕಾಣುವುದೇ ಅಪರೂಪ.
ಮೈಯ ತುಪ್ಪಳ ಬೂದು ಬಣ್ಣವಾಗಿದ್ದು ಅದರ ಮೇಲೆ ಸಣ್ಣ ಸಣ್ಣ ಕಪ್ಪು ಚುಕ್ಕೆಗಳು ಉದ್ದಗೆರೆಗಳಂತೆ ಬಾಸವಾಗುತ್ತದೆ. ದೇಹದ ಆಕಾರಕ್ಕೆ ಹೋಲಿಸಿದರೆ ಬಾಲ ಸ್ವಲ್ಪ ಚಿಕ್ಕದಾಗಿರುತ್ತದೆ ಹಾಗೂ ಬೆನ್ನ ಮೇಲೆ ದಟ್ಟವಾಗಿ ಎದ್ದು ನಿಂತಿರುವ ಕಪ್ಪು ಕೂದಲು ಕಾಣ ಸಿಗುತ್ತದೆ.
ಮಾಹಿತಿಗಳ ಪ್ರಕಾರ ಸುಮಾರು 8 ರಿಂದ 9 ಕೆಜಿ ತೂಕವನ್ನು ಹೊಂದಿರುತ್ತದೆ ಈ ಚಿರತೆ ಬೆಕ್ಕು ಹೊರ ಸೂಸುವ ಪರಿಮಳದಿಂದ ಇಂದಿಗೂ ಸುಗಂಧದ ದ್ರವ್ಯಗಳಲ್ಲಿ ಕೆಲವು ಔಷಧಿಗಳಲ್ಲಿ ಹಾಗೂ ಬೀಡಿ ತಯಾರಿಕೆಯಲ್ಲಿ ಪರಿಮಳ ದ್ರವ್ಯವಾಗಿ ಬಳಸುತ್ತಾರೆ.