ಮಂಗಳೂರು (ಶಿವಮೊಗ್ಗ): ಮನೆಯಲ್ಲೇ ಗಾಂಜಾ ಬೆಳೆದು ಮಾರಾಟ ಮಾಡುತ್ತಿರುವ ಆರೋಪದಲ್ಲಿ ಮೆಡಿಕಲ್ ವಿದ್ಯಾರ್ಥಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ತಮಿಳುನಾಡು ಕೇರಳದ ಮೂರು ವಿದ್ಯಾರ್ಥಿಗಳು ಮನೆಯಲ್ಲಿ ಹೈಟೆಕ್ ಫಾರ್ಮಿಂಗ್ ಮೂಲಕ ಗಾಂಜಾ ಬೆಳೆದು ಮಾರಾಟ ಮಾಡುತ್ತಿದ್ದರೆನ್ನಲಾಗಿದೆ. ತಮಿಳುನಾಡು ಕೃಷ್ಣಗಿರಿಯ ವಿಘ್ನ ರಾಜ್ (28 ) ಇಲ್ಲಿನ ಖಾಸಗಿ ಮೆಡಿಕಲ್ ಕಾಲೇಜಿನಲ್ಲಿ ಓದುತ್ತಿದ್ದು ಶಿವಗಂಗಾ ಲೇ ಔಟ್ ನಲ್ಲಿ ಮನೆ ಮಾಡಿಕೊಂಡಿದ್ದ. ಮನೆ ಮಾಲೀಕರ ಗಮನಕ್ಕೆ ಬಾರದಂತೆ ಮನೆಯೊಳಗೆ ಕೃತಕ ವಾತಾವರಣ ಸೃಷ್ಟಿಸಿ ಪಾಟ್ ಗಳಲ್ಲಿ ಗಾಂಜಾ ಬೆಳೆದು ಕಾಲೇಜ್ ವಿದ್ಯಾರ್ಥಿಗಳಿಗೆ ಮಾರಾಟ ಮಾಡುತ್ತಿದ್ದುದಾಗಿ ತಿಳಿದು ಬಂದಿದೆ.
ಮೂರುವರೆ ವರ್ಷದಿಂದ ಈ ದಂಧೆಯಲ್ಲಿ ತೊಡಗಿಕೊಂಡಿದ್ದಾರೆ ಎಂಬ ಮಾಹಿತಿ ಪೊಲೀಸರಿಗೆ ಲಭ್ಯವಾಗಿದ್ದು, ಇದರಲ್ಲಿ ಯಾರ್ಯಾರು ಭಾಗಿಯಾಗಿದ್ದಾರೆ ಎಂದು ತನಿಖೆ ನಡೆಸಲಾಗುತ್ತಿದೆ. ಕೇರಳದ ಇಡುಕ್ಕಿಯ ವಿನೋದ್ ಕುಮಾರ್( 27), ತಮಿಳುನಾಡು ಧರ್ಮಪುರಿಯ ಪಾಂಡಿ ದೊರೈ (27) ಎಂಬವರು ಗಾಂಜಾ ಖರೀದಿಗೆ ಬಂದಿದ್ದು ಅವರನ್ನೂ ಬಂಧಿಸಲಾಗಿದೆ.